ಮಚ್ಚಿನ ಮೂಲ್ಯರ ಯಾನೆ ಕುಂಬಾರರ ಮಹಿಳಾ ಸಂಘದಿಂದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ, ‘ಶ್ರೀರಾಮದರ್ಶನ’ ಯಕ್ಷಗಾನ ತಾಳಮದ್ದಳೆ

0

ಮಚ್ಚಿನ: ಮೂಲ್ಯರ ಯಾನೆ ಕುಂಬಾರರ ಸಂಘ ಮಚ್ಚಿನ, ಮೂಲ್ಯರ ಯಾನೆ ಕುಂಬಾರರ ಮಹಿಳಾ ಸಂಘ ಮಚ್ಚಿನ ಇದರ ವತಿಯಿಂದ 11 ನೇ ವರ್ಷದ ಸಾರ್ವಜನಿಕ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆಯು ಮಚ್ಚಿನ ಸಮುದಾಯ ಭವನದಲ್ಲಿ ನಡೆಯಿತು.

ತದನಂತರ ಯಕ್ಷ ಬಳಗ ಬಳ್ಳ ಮಂಜ ಇದರ ವತಿಯಿಂದ ಶ್ರೀರಾಮದರ್ಶನ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಿತು.

ಪೂಜಾ ಅರ್ಚಕರಾದ ಅನಂತ ಕೃಷ್ಣ ಭಟ್ ಕುಕ್ಕಿಲ, ಸಂಘದ ಅಧ್ಯಕ್ಷರಾದ ನಾನ್ಯಪ್ಪ ಮೂಲ್ಯ, ಕಾರ್ಯದರ್ಶಿ ಹರ್ಷ ಬಳ್ಳಮಂಜ, ಮಹಿಳಾ ಸಂಘದ ಅಧ್ಯಕ್ಷರಾದ ಭವ್ಯ ಜಯರಾಮ್, ಕಾರ್ಯದರ್ಶಿ ಮೋಹಿನಿ, ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here