ಲಾಯಿಲ: ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ

0

ಲಾಯಿಲ: ಕಪುಚಿನ್ ಕೃಷಿಕ ಸೇವಾ ಕೇಂದ್ರ (ರಿ) ವಿಮುಕ್ತಿ, ಲಾಯಿಲ ಬೆಳ್ತಂಗಡಿ, ಹಾಗೂ ಚೈಲ್ಡ್‌ಫಂಡ್ ಇದರ ಸಹಯೋಗದೊಂದಿಗೆ, ಶಿಶು ಅಭಿವೃದ್ಧಿ ಯೋಜನಾ ಕಛೇರಿ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಬೆಳ್ತಂಗಡಿ, ತಾಲೂಕು ಆರೋಗ್ಯಾಧಿಕಾರಿ ಕಛೇರಿ ಬೆಳ್ತಂಗಡಿ, ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವು ಸಿ.ಕೆ.ಎಸ್.ಕೆ ಕಛೇರಿಯಲ್ಲಿ ಹಾಗೂ ಯೋಜನಾ ವಲಯದ ವಿವಿಧ 15 ಅಂಗನವಾಡಿ ಕೇಂದ್ರಗಳಾದ ಕುಂಟಾಲ್‌ಪಲ್ಕೆ, ಬೆಳಾಲು, ಕನ್ಯಾಡಿ-1, ಬೆದ್ರಬೆಟ್ಟು, ಪೆರ್ಲಬೈಪಾಡಿ, ಕಲ್ಮಂಜ, ಕಲ್ಲಾಜೆ, ಗುರಿಪಳ್ಳ, ಕಿಲ್ಲೂರು, ಆದೂರ್‌ಪೇರಾಲ್, ಕಲ್ಲಾಜೆ, ಚಂದ್ಕೂರು, ಬಲ್ಯಾರೊಟ್ಟು, ಕೊಪ್ಪದಬೈಲು, ಹಾಗೂ ಬಜಿಲ ಅಂಗನವಾಡಿ ಕೇಂದ್ರಗಳಲ್ಲಿ ನಡೆಸಲಾಯಿತು.

”ಸ್ತನ್ಯಪಾನ ಸಾಕಾರ- ವೃತ್ತಿ ನಿರತ ಪೋಷಕರ ಬಲವರ್ಧನೆ” 2023ರ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದ ಘೋಷ್ಯವಾಕ್ಯದ ಮುಖ್ಯ ಉದ್ದೇಶವಾದ-ಭಾರತದಲ್ಲಿನ ರಾಜ್ಯ ಮತ್ತು ಜಿಲ್ಲೆಗಳ ಆರೋಗ್ಯ ಸೇವಾ ಸಂಸ್ಥೆಗಳು ಮತ್ತು ವೃತ್ತಿ ನಿರತ ಸ್ಥಳಗಳಲ್ಲಿ ಮಹಿಳೆಯರನ್ನು ಬೆಂಬಲಿಸಲು ವ್ಯಾಪಕ ಜಾಗೃತಿ ಮೂಡಿಸುವ ಕುರಿತಾಗಿ ತಾಯಿಯ ಎದೆಹಾಲಿನ ಮಹತ್ವದ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.ಈ ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ, ಸಮುದಾಯ ಆರೋಗ್ಯ ಅಧಿಕಾರಿಗಳು, ಪ್ರಾಥಮಿಕ ಆರೋಗ್ಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಶಿಶು ಅಭಿವೃದ್ಧಿ ಇಲಾಖೆಯ ಯೋಜನಾಧಿಕಾರಿಗಳು, ಸಿ.ಕೆ.ಎಸ್.ಕೆ ವಿಮುಕ್ತಿ ಸಂಸ್ಥೆಯ ಸಿಬ್ಬಂದಿಗಳು ಭಾಗವಹಿಸಿ ಸ್ತನ್ಯಪಾನದ ಕುರಿತಾಗಿ ಮಾಹಿತಿ ನೀಡಿದರು.

ಈ ಕಾರ್ಯಕ್ರಮದಲ್ಲಿ ಗರ್ಭಿಣಿ, ಬಾಣಂತಿಯರು ಹಾಗೂ ಅಂಗನವಾಡಿ ಮಕ್ಕಳ ಪೋಷಕರು ಸೇರಿದಂತೆ 304 ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಹಿತಿ ಪಡೆದುಕೊಂಡರು.

p>

LEAVE A REPLY

Please enter your comment!
Please enter your name here