ಬೆಳ್ತಂಗಡಿ: ಸ್ನೇಹ ಕಿರಣ್ ಮಹಿಳಾ ಜಿಲ್ಲಾ ಒಕ್ಕೂಟ, ದ.ಕ ಸೆ.26, 2019ರಂದು ಪ್ರಾರಂಭವಾಗಿದ್ದು, ಡಿ.ಕೆ.ಆರ್.ಡಿ.ಎಸ್ ಸಮಾಜ ಸೇವಾ ಸಂಸ್ಥೆಯ ಅಂಗ ಸಂಸ್ಥೆಯಾಗಿದೆ.ಇದರ 2023-2026ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ಪಥಗ್ರಹಣ ಕಾರ್ಯಕ್ರಮ ಸಾನ್ ತೋಮ್ ಟವರ್ ಬೆಳ್ತಂಗಡಿಯಲ್ಲಿ ಆ.24ರಂದು ನಡೆಯಿತು.
ನೂತನ ಅಧ್ಯಕ್ಷರಾಗಿ ಏಲಿಯಮ್ಮ ತೋಮಸ್, ಉಪಾಧ್ಯಕ್ಷರಾಗಿ ವಲ್ಸಮ್ಮ ಎ.ಜೆ, ಕಾರ್ಯದರ್ಶಿಯಾಗಿ ಡೈಸಿ ಜಾಯ್, ಜತೆ ಕಾರ್ಯದರ್ಶಿಯಾಗಿ ಲಲಿತ.ಕೆ, ಕೋಶಾಧಿಕಾರಿಯಾಗಿ ಮಂಜುಳಾ ಜೋನ್, ಹಾಗೂ ಸಮಿತಿ ಸದಸ್ಯರಾಗಿ ಗ್ರೇಸಿ ತೋಮಸ್, ಆಲಿಸ್, ಭವ್ಯ, ನಿಶಾ ಆಯ್ಕೆಯಾಗಿದ್ದಾರೆ.
ಒಕ್ಕೂಟದ ಪದಾಧಿಕಾರಿಗಳಿಗೆ ನಾಯಕತ್ವದ ಕುರಿತು ವಂದನೀಯ ಫಾದರ್ ಬಿನೋಯ್ ಎಜೆ ಇವರು ತರಬೇತಿಯನ್ನು ನೀಡಿದರು.ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ಸಿಬ್ಬಂದಿ ವರ್ಗದವರು ಸಹಕರಿಸಿದರು.
p>