







ಬೆಳ್ತಂಗಡಿ: ಅಪರಿಚಿತ ವ್ಯಕ್ತಿಯೋರ್ವರು ಲೋನ್ ಕೊಡುವುದಾಗಿ ನಂಬಿಸಿ ದಾಖಲೆ ಪಡೆದು ಕೊಂಡು 8ಲಕ್ಷ ರೂ. ವಂಚಿಸಿದ ಘಟನೆ ಪಡಂಗಡಿಯಲ್ಲಿ ನಡೆದಿದೆ.


ಪಡಂಗಡಿ ನಿವಾಸಿ ನೀನಾ ರೋಡ್ರಿಗಸ್ (35ವ) ವಂಚನೆಗೆ ಒಳಗಾದವರು. ಅವರಿಗೆ ಆ.1ರಂದು ಅಪರಿಚಿತ ವ್ಯಕ್ತಿಯೋರ್ವರು ರಿಲಾಯನ್ಸ್ ಪೈನಾನ್ಸ್ ನಿಂದ ಕರೆ ಮಾಡುತ್ತಿರುವುದಾಗಿ ತಿಳಿಸಿ ಶೇ.5 ಬಡ್ಡಿ ದರದಲ್ಲಿ ಲೋನ್ ಕೊಡುವುದಾಗಿಯೂ,ಲೋನ್ ಬೇಕಾದಲ್ಲಿ ಬ್ಯಾಂಕ್ ಹಾಗೂ ಇತರ ದಾಖಲಾತಿಗಳನ್ನು ನೀಡುವಂತೆ ತಿಳಿಸಿದ್ದಾರೆ.ಇದನ್ನು ನಂಬಿದ ಲೀನಾ ರೊಡ್ರಿಗಸ್ ಕರೆ ಬಂದ ನಂಬರ್ಗೆ ಬ್ಯಾಂಕ್ ದಾಖಲೆ ಸೇರಿದಂತೆ ಇತರ ದಾಖಲೆಗಳನ್ನು ಕಳುಹಿಸಿದ್ದು, ಬಳಿಕ ಅಪರಿಚಿತ ವ್ಯಕ್ತಿಯು ಇವರ ಖಾತೆಗಳಿಂದ ಒಟ್ಟು 8,40,275 ರೂ. ಹಣವನ್ನು ಬೇರೆ ಬೇರೆ ಖಾತೆಗಳಿಗೆ ಆನ್ ಲೈನ್ ಮುಖಾಂತರ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.









