ಖಂಡಿಗ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರಾವಣ ಮಾಸದ ಗಮಕ ಕಾರ್ಯಕ್ರಮ

0

ತೆಂಕಕಾರಂದೂರು: ಬೆಳ್ತಂಗಡಿ ತಾಲೂಕು, ಗಮಕ ಕಲಾ ಪರಿಷತ್ತಿನ ವತಿಯಿಂದ ಬದ್ಯಾರಿನ ಖಂಡಿಗ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಗಮಕ ವಾಚನ ವ್ಯಾಖ್ಯಾನ ಕಾರ್ಯಕ್ರಮ ನಡೆಯಿತು.

ತಾಲೂಕು ಗಮಕ ಕಲಾ ಪರಿಷತ್ತಿನ ಕಾರ್ಯದರ್ಶಿ ಗಮಕಿ ಶ್ರೀಮತಿ ಮೇಧಾ ಕುಮಾರವ್ಯಾಸನ ಕರ್ಣಾಟ ಭಾರತ ಮಂಜರಿಯಿಂದ ಆಯ್ದ ದೂರ್ವಾಸ ಆತಿಥ್ಯ ಎಂಬ ಕಾವ್ಯ ಭಾಗದ ವಾಚನವನ್ನು ನಡೆಸಿಕೊಟ್ಟರು.

ಹಿರಿಯ ಸಾಹಿತಿ ಚಿಂತಕ ಪ. ರಾಮಕೃಷ್ಣ ಶಾಸ್ತ್ರಿ ಮನೋಜ್ಞವಾಗಿ ವ್ಯಾಖ್ಯಾನವನ್ನು ನಡೆಸಿಕೊಟ್ಟರು.ಕಾರ್ಯಕ್ರಮದ ಕುರಿತು ಗಮಕ ಕಲಾ ಪರಿಷತ್ತಿನ ದ.ಕ ಜಿಲ್ಲಾ ಅಧ್ಯಕ್ಷ ಪ್ರೊ.ಮಧೂರು ಮೋಹನ ಕಲ್ಲೂರಾಯರು ಮಾತನಾಡುತ್ತಾ “ಶ್ರಾವಣ ಮಾಸವು ಹಬ್ಬ ಹರಿದಿನಗಳು ಆರಂಭವಾಗುವ ಮಾಸವಾಗಿದ್ದು, ಈ ಸಂದರ್ಭದಲ್ಲಿ ಧಾರ್ಮಿಕ ಚಿಂತನೆಯುಳ್ಳ ಕಥಾ ಭಾಗವನ್ನು ಆಲಿಸುವುದರಿಂದ ಪುಣ್ಯ ಸಂಪಾದನೆ ಆಗುತ್ತದೆ.

ಕರ್ನಾಟಕ ಗಮಕ ಕಲಾ ಪರಿಷತ್ ಶ್ರಾವಣ ಮಾಸದಲ್ಲಿ ಗಮಕ-ವಾಚನ ವ್ಯಾಖ್ಯಾನ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಅಯೋಜಿಸುತ್ತಿದೆ.ಧರ್ಮಸ್ಥಳದ ಡಾ. ವೀರೇಂದ್ರ ಹೆಗ್ಗಡೆಯವರು ಅಷಾಡ ಮತ್ತು ಶ್ರಾವಣದಲ್ಲಿ ಎರಡು ತಿಂಗಳುಗಳ ಕಾಲ ಧರ್ಮಸ್ಥಳದಲ್ಲಿ ವಾಚನ ಪ್ರವಚನ ಕಾರ್ಯಕ್ರಮವನ್ನು ಗಮಕೀಯ ಶೈಲಿಯಲ್ಲಿ ಕಳೆದ 52 ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ.ಆದ್ದರಿಂದ ಶ್ರಾವಣ ಮಾಸದ ಗಮಕ ಕಾರ್ಯಕ್ರಮ ತನ್ನದೇ ಆದ ಮಹತ್ವವನ್ನು ಪಡೆದುಕೊಂಡಿದೆ ಎಂದರು.

ಕಾರ್ಯಕ್ರಮವನ್ನು ಆಯೋಜಿಸಿ, ಸಂಘಟಿಸಿದ ಬೆಳ್ತಂಗಡಿ ತಾಲೂಕು ಗಮಕಲಾ ಪರಿಷತ್ತಿನ ಅಧ್ಯಕ್ಷ ರಾಮಕೃಷ್ಣ ಭಟ್‌ ಉಜಿರೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

p>

LEAVE A REPLY

Please enter your comment!
Please enter your name here