ಮೊಗ್ರು: ಗೌಡರ ಯಾನೆ ಒಕ್ಕಲಿಗ ಸೇವಾ ಸಂಘದ ಸಭೆ

0

ಮೊಗ್ರು: ಆ.20ರಂದು ಮೊಗ್ರು ಗೌಡರ ಯಾನೆ ಒಕ್ಕಲಿಗ ಸೇವ ಸಂಘ ಇದರ ಸಭೆ ನಡೆಸಲಾಯಿತು.

ಈ ಸಭೆಯಲ್ಲಿ ಬೆಳ್ತಂಗಡಿ ತಾಲೂಕು ಪದಾಧಿಕಾರಿಗಳ ಸಮ್ಮುಖದಲ್ಲಿ ಮೊಗ್ರು ಗ್ರಾಮದ ನೂತನ ಗೌಡರ ಯಾನೆ ಒಕ್ಕಲಿಗ ಸೇವ ಸಂಘ ಗ್ರಾಮ ಸಮಿತಿಯನ್ನು ರಚಿಸಲಾಯಿತು.ಇದರ ಅಧ್ಯಕ್ಷರಾಗಿ ಮನೋಹರ ಗೌಡ ಅಂತರ ಮತ್ತು ಕಾರ್ಯಧರ್ಶಿಯಾಗಿ ದೇಜಪ್ಪ ಗೌಡ ಅಂತರ, ಉಪಾಧ್ಯಕ್ಷರಾಗಿ ಬಾಲಕೃಷ್ಣ ಗೌಡ ಹೊಸಮನೆ, ದಯಾನಂದ ಗೌಡ ಉಂತಣಾಜೆ, ಯಾದವ ಗೌಡ ಉಳಿಯ, ಪುರಂದರ ಗೌಡ ನೈಮಾರು, ಕೋಶಾಧಿಕಾರಿಯಾಗಿ ಶಶಿಧರ್ ಗೌಡ ಉಳಿಯ ಇವರುಗಳನ್ನು ಆಯ್ಕೆ ಮಾಡಲಾಯಿತು.ಊರಿನಲ್ಲಿ ಕಾರ್ಯಕ್ರಮದ ಗೌಡಸ್ತಿಕೆ ಮಾಡುವ ಹಿರಿಯರನ್ನು ಸಮಿತಿಯ ಗೌರಧ್ಯಕ್ಷರನ್ನಾಗಿ ಮಾಡಲಾಯಿತು.

ಮತ್ತು ಮುಗೇರಡ್ಕ ವಲಯ ಸಮಿತಿಯ ಅಧ್ಯಕ್ಷರಾಗಿ ಬಾಲಕೃಷ್ಣ ಗೌಡ ಮುಗೇರಡ್ಕ, ಕಾರ್ಯಧರ್ಶಿಯಾಗಿ ರಮೇಶ್ ಗೌಡ ನೆಕ್ಕರಾಜೆ, ಗೌರವಧ್ಯಕ್ಷರಾಗಿ, ಕೃಷ್ಣಪ್ಪ ಗೌಡ ನೈಮಾರು, ಜಿನ್ನಾಪ್ಪ ಗೌಡ ಗೌಡತಿಗೆ, ಮತ್ತು ಉಪಾಧ್ಯಕ್ಷರಾಗಿ ದೀಕ್ಷಿತ್ ಗೌಡ ನೈಮಾರು, ಪುರಂದರ ಗೌಡ ಎರ್ಮಲ, ಕೋಶಾಧಿಕಾರಿಯಾಗಿ ಜಗ್ಗದೀಶ್ ಗೌಡ ಅರ್ಬಿ ಇವರೂಗಳನ್ನು ಆಯ್ಕೆ ಮಾಡಲಾಯಿತು.

ನೂತನ ಸಮಿತಿ ರಚನೆ ಮಾಡಿ ಮುಂದಿನ ಕಾರ್ಯ ಚಟುವಟಿಕೆಗಳ ಬಗ್ಗೆ ಚರ್ಚಿಸಲಾಯಿತು.

ಈ ಸಭೆಯಲ್ಲಿ ಧರ್ಮಸ್ಥಳ ಸೌಜನ್ಯ ಹತ್ಯೆ ಬಗ್ಗೆ ಖಂಡನೆ ವ್ಯಕ್ತಪಡಿಸಿ ಆ ಕೊಲೆಗೆ ಸಂಬಂದಿಸಿದ ತನಿಖೆಯನ್ನು ಇನ್ನೊಮ್ಮೆ ಮಾಡಿಸಲು ಸರಕಾರಕ್ಕೆ ಒತ್ತಾಯ ಮಾಡುವ ಮನವಿ ಪತ್ರವನ್ನು ಇದೆ ಬರುವ ದಿನಾಂಕ 24-08-2023 ರಂದು ಬಂದಾರು ಗ್ರಾಮಪಂಚಾಯತಗೇ ಮೊಗ್ರು ಗೌಡ ಸಂಘದ ವತಿಯಿಂದ ನೀಡುವುದು ಎಂದು ತೀರ್ಮಾನಮಾಡಲಾಯಿತು. ಹಾಗೇನೇ ಮುಗೇರಡ್ಕ ದೈವಸ್ಥಾನದಲ್ಲಿ ನಿಜವಾದ ಆರೋಪಿಗಳಿಗೆ ದೈವಗಳು ಶಿಕ್ಷೆ ನೀಡುವಂತೆ ಪ್ರಾರ್ಥನೆ ಸಲ್ಲಿಸಲಾಯಿತು

p>

LEAVE A REPLY

Please enter your comment!
Please enter your name here