ಸೌಜನ್ಯ ಪ್ರಕರಣ-ನೈಜ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಅವಹೇಳನ ಮಾಡದಂತೆ ಬೈಲಂಗಡಿ ಶ್ರೀ ಸೋಮನಾಥೆಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ

0

ಬೈಲಂಗಡಿ: ಶ್ರೀ ಸೋಮನಾಥೆಶ್ವರ ದೇವಸ್ಥಾನ ಬೈಲಂಗಡಿಯಲ್ಲಿ ಸೌಜನ್ಯಳನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ ನೈಜ ಆರೋಪಿಗಳಿಗೆ ಶಿಕ್ಷೆ ಆಗಬೇಕು ಮತ್ತು ಹಿಂದೂಗಳ ಧಾರ್ಮಿಕ ಶ್ರದ್ಧಾ ಕೇಂದ್ರವಾದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಮತ್ತು ಪೂಜ್ಯ ಖಾವಂದರ ಬಗ್ಗೆ ಅವಹೇಳನ ಮಾಡದಂತೆ ಅವರಿಗೆ ಒಳ್ಳೆಯ ಬುದ್ದಿಯನ್ನು ಕೊಡಲಿ ಎಂದು ಪೂಜೆ ಮಾಡಿ ಪ್ರಾರ್ಥನೆ ಮಾಡಲಾಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಕಮಲಾಕ್ಷ ಪಾದೆ, ಸಿಯೋನ್ ಆಶ್ರಮದ ಮ್ಯಾನೇಜಿಂಗ್ ಟ್ರಸ್ಟಿ ಯು.ಸಿ.ಪೌಲೊಸ್, ಜನಜಾಗೃತಿ ವಲಯ ಸಮಿತಿ ಅಧ್ಯಕ್ಷರಾದ ರಾಜೇಂದ್ರ ಇಂದ್ರ, ನೆರಿಯ ಒಕ್ಕೂಟಗಳ ವಲಯಧ್ಯಕ್ಷರಾದ ಸತೀಶ್, ದೇವಸ್ಥಾನದ ಅರ್ಚಕರಾದ ದಿವಾಕರ ಭಟ್, ಜನಜಾಗೃತಿ ಪದಾಧಿಕಾರಿ ಒಬಯ್ಯಾ ಗೌಡ, ಆಂತರಿಕ ಲೆಕ್ಕಪರಿಶೋದಕರಾದ ಶಿವರಾಮ್, ಮೇಲ್ವಿಚಾರಕರಾದ ರಾಜೇಶ್, ಒಕ್ಕೂಟದ ಎಲ್ಲಾ ಪದಾಧಿಕಾರಿಗಳು, ಗಣ್ಯರು, ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.

p>

LEAVE A REPLY

Please enter your comment!
Please enter your name here