ಕಲ್ಲೇರಿ ನಿಸರ್ಗ ರಿಕ್ಷಾ ಚಾಲಕ-ಮಾಲಕರ ಸಂಘದ ವಾರ್ಷಿಕ ಮಹಾಸಭೆ

0

ತಣ್ಣೀರುಪಂತ: ಬಿಎಂಎಸ್ ಸಂಯೋಜಿತ ನಿಸರ್ಗ ರಿಕ್ಷಾ ಚಾಲಕ -ಮಾಲಕರ ಸಂಘ ಕಲ್ಲೇರಿ ಇದರ ವಾರ್ಷಿಕ ಮಹಾಸಭೆಯ ಆ.15 ರಂದು ಕಲ್ಲೇರಿ ಬಾಪೂಜಿ ಕೇಂದ್ರದಲ್ಲಿ ನಡೆಯಿತು.ಸಂಘದ ನೂತನ ಅಧ್ಯಕ್ಷರಾಗಿ ನಾರಾಯಣ ಪೂಜಾರಿ ಹಾಗು ಉಪಾಧ್ಯಕ್ಷರಾಗಿ ರಫೀಕ್ ಅವರು ಆಯ್ಕೆಯಾಗಿದ್ದಾರೆ.

ಕಾರ್ಯದರ್ಶಿಯಾಗಿ ವಿಜೇತ್ ಕುಮಾರ್ ಹಾಗು ಜತೆ ಕಾರ್ಯದರ್ಶಿಯಾಗಿ ಲಾರೆನ್ಸ್ ವೇಗಸ್ ರವರು, ಖಜಾಂಚಿಯಾಗಿ ಕೆ. ಶರೀಫ್ ಇವರು ಆಯ್ಕೆಯಾದರುಸಭೆಯಲ್ಲಿ ಸಂಘದ ಪದಾಧಿಕಾರಿಗಳು ಪದಗ್ರಹಣ ನಡೆಯಿತು.

ತಣ್ಣೀರುಪಂತ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪುಟ್ಟಸ್ವಾಮಿ, ಸಂಘದ ಕಾನೂನು ಸಲಹೆಗಾರರು ಅಬ್ದುಲ್ ರಹಿಮಾನ್‌, ಪಂಚಾಯತ್ ಸದಸ್ಯರು ಜಯವಿಕ್ರಮ್ ಹಾಗೂ ವರ್ತಕರ ಸಂಘದ ಅಧ್ಯಕ್ಷರಾದ ಡಾ.ಸಂತೋಷ್ ಉಪಸ್ಥಿತರಿದ್ದರು.

p>

LEAVE A REPLY

Please enter your comment!
Please enter your name here