ಬೆಳ್ತಂಗಡಿ ಸೋಜಾ ಇಲೆಕ್ಟ್ರಾನಿಕ್ಸ್ ಸಂಸ್ಥೆಯಲ್ಲಿ 77ನೇ ಸ್ವಾತಂತ್ರ್ಯೋತ್ಸವ ಆಚರಣೆ

0

ಬೆಳ್ತಂಗಡಿ: ಸೋಜಾ ಇಲೆಕ್ಟ್ರಾನಿಕ್ಸ್ ಬೆಳ್ತಂಗಡಿ ಸಂಸ್ಥೆಯು 77ನೇ ಸ್ವಾತಂತ್ರ್ಯೋತ್ಸವವನ್ನು ಅತೀ ವಿಜೃಂಭಣೆಯಿಂದ ಧ್ವಜಾರೋಹಣಗೈಯುವ ಮೂಲಕ ಚಾಲನೆ ನೀಡಲಾಯಿತು.

ಧ್ವಜಾರೋಹಣವನ್ನು ಡಾ|| MSM ಅಬ್ದುಲ್ ರಶೀದ್ ಝೈನಿ ಖಾಮಿಲ್ ಸಖಾಫಿಯವರು ನೆರವೇರಿಸಿ ” ನಮ್ಮ ದೇಶದ ಸಂಸ್ಕೃತಿಯನ್ನು ಉಳಿಸಿಕೊಳ್ಳಲು, ಸ್ವಾತಂತ್ರ್ಯವನ್ನು ಪಡೆಯಲು, ಸ್ವತಂತ್ರ ಭಾರತವನ್ನು ಅನುಭವಿಸಲು ಯಾವುದೇ ಜಾತಿ,ಮತ,ಪಂಥ, ಪಂಗಡ, ವಿಶ್ವಾಸ,ಆದರ್ಶ, ಅನುಷ್ಠಾನ, ನಮ್ಮ ಆಚಾರಗಳು ನಮ್ಮ ಸಂಸ್ಕೃತಿಗೆ ಯಾವತ್ತೂ ಅಡ್ಡಿಯಾಗಿಲ್ಲ ಎಂದು ಕಳೆದ 76 ವರ್ಷಗಳಲ್ಲಿ ತೋರೀಸಿಕೊಟ್ಟಿದ್ದೀವೆ. ಒಟ್ಟಾಗಿ ಬಾಳುವಂತ ಸಂಸ್ಕೃತಿ ಕಾಣಬೇಕಾದರೆ ಅದು ಭಾರತದಲ್ಲಿ ಮಾತ್ರ ಸಾಧ್ಯ ಎಂದು ಹೇಳಿ ಸೋಜಾ ಸಂಸ್ಥೆಯ ಕುರಿತಾದ ಶ್ಲಾಘನೆ ವ್ಯಕ್ತಪಡಿಸಿದರು.

ಸೋಜಾ ಎಲೆಕ್ಟ್ರಾನಿಕ್ಸ್ ಬೆಳ್ತಂಗಡಿ ಸಂಸ್ಥೆಯ ಸಿಬ್ಬಂದಿ ವರ್ಗ ಪ್ರಾರ್ಥನಾ ಗೀತೆ ಹಾಡಿದರು.ಸೋಜಾ ಎಲೆಕ್ಟ್ರಾನಿಕ್ಸ್ ಸಂಸ್ಥೆಯ 28 ವರ್ಷಗಳ ವರದಿಯನ್ನು ಪ್ರಕೃತಿಯವರು ವಾಚಿಸಿದರು.

ಕಾರ್ಯಕ್ರಮದಲ್ಲಿ ನಿಸ್ವಾರ್ಥ ಸೇವೆಗೈದಂತಹ ಮ್ಯಾನೇಜರ್ ಲ್ಯಾನ್ಸಿ ಡಿ’ ಸೋಜಾ ಹಾಗೂ ಸೇಲ್ಸ್ ಮ್ಯಾನ್ ರಮೇಶ್.ಬಿ ಇವರನ್ನು ಸನ್ಮಾನಿಸಲಾಯಿತು.ನಂತರ ‘ಮಳಿಗೆ ವೀಕ್ಷಿಸಿ – ಉಚಿತ ಕೂಪನ್ ಗಳಿಸಿ’ ಎಂಬ ಯೋಜನೆಯ ವಿಜೇತರನ್ನು ಘೋಸಿಸಲಾಯಿತು.

ಖಾದರ್ ಅವರ ಮಿಮಿಕ್ರಿ, ಅಶ್ವಿರ್ ಸೋಮಂದಡ್ಕ, ಸೋಜಾ ಸಂಸ್ಥೆಯ ಸಿಬ್ಬಂದಿಯಾದ ಶ್ರೀಕಾಂತ್ ರವರು ಕ್ರಾಂತಿಗೀತೆಗಳನ್ನು ಹಾಡಿ ಮನರಂಜಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತ ಪಾಲುದಾರಾದ ಆಲ್ಫೋನ್ಸ್ ಫ್ರಾಂಕೊ,ಕ್ಯಾಥೋಲಿಕ್ ಕ್ರೆಡಿಟ್ ಕೋ. ಆಪರೇಟಿವ್ ಸೊಸೈಟಿಯ ಅಧ್ಯಕ್ಷರು ಹೆನ್ರಿ ಲೋಬೋ, ಧೂಮ್ ಧಮಾಕ ಬೆಳ್ತಂಗಡಿಯ ಮಾಲಕರಾದ ಅಬ್ದುಲ್ ರಝಾಕ್, ಸೋಜಾ ಇಲೆಕ್ಟ್ರಾನಿಕ್ಸ್ ಬೆಳ್ತಂಗಡಿಯ ಮ್ಯಾನೇಜರ್ ಲ್ಯಾನ್ಸಿ ಡಿ’ಸೋಜಾ, ಆರ್ ಪಿ. ಕಾನ್ಸ್ಟ್ರಕ್ಷನ್ ಮಾಲಕರಾದ ರಾಹುಲ್.ಪಿ, ವಸಿಷ್ಠ ಎಲೆಕ್ಟ್ರಿಕಲ್ಸ್ ಬೆಳ್ತಂಗಡಿಯ ಮಾಲಕರಾದ ವೆಂಕಟೇಶ್, ಇಕೋ ಫ್ರೆಶ್ ಎಂಟರ್ಪ್ರೈಸಸ್ ಬೆಳ್ತಂಗಡಿಯ ವ್ಯವಸ್ಥಾಪಕರು ರಾಕೇಶ್ ಹೆಗ್ಡೆ, ಕೆನರಾ ಸೈಕಲ್ಸ್& ಸ್ಪೇರ್ ಬೆಳ್ತಂಗಡಿಯ ಮಾಲಕರು ಉಮರ್ ಅವರು ಹಾಗೂ ಇತರ ಸ್ಥಳೀಯ ಸಂಸ್ಥೆಯವರು ಉಪಸ್ಥಿತರಿದ್ದರು.

ಅತಿಥಿಗಳಿಗೆ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು.ಕಾರ್ಯಕ್ರಮವನ್ನು ಅಸೀನಾ ಮತ್ತು ಖಾದರ್ ಅವರು ಸಂಯೋಜಿಸಿ, ಆಲ್ಫೋನ್ಸ್ ಫ್ರಾಂಕೊರವರು ಸ್ವಾಗತಿಸಿ, ಸೇಲ್ಸ್ ಎಕ್ಸುಕ್ಯುಟಿವ್ ರಮೇಶ್.ಬಿ ಅವರು ಧನ್ಯವಾದ ಗೈದರು.

p>

LEAVE A REPLY

Please enter your comment!
Please enter your name here