ಉರ್ನಡ್ಕ ನಿವಾಸಿ ಲೋಕೇಶ್ ನಾಪತ್ತೆ-ಎಲ್ಲಾ ಕಡೆಯಿಂದಲೂ ಹುಡುಕಾಟ

0

ರೆಖ್ಯಾ: ಇಲ್ಲಿಯ ಉರ್ನಡ್ಕ ನಿವಾಸಿ ದಿ/ಶಿವಣ್ಣ ಗೌಡರ ಕೊನೆಯ ಪುತ್ರ ಲೋಕೇಶ್ (40ವ) ಎಂಬವರು ಆ.14ರಂದು ಸಂಜೆಯಿಂದ ನಾಪತ್ತೆಯಾಗಿದ್ದು, ಅವರ ಬೈಕ್ ನೇಲ್ಯಡ್ಕ ಹಿ.ಪ್ರಾ.ಶಾಲಾ ಬಳಿ ರಸ್ತೆ ಬದಿ ಲಾಕ್ ಹಾಕಿ ನಿಲ್ಲಿಸಿದ ಸ್ಥಿತಿಯಲ್ಲಿ ಕಂಡುಬಂದಿದೆ.ಅವರ ಮೊಬೈಲ್ ಸ್ವಿಚ್ ಆಫ್ ಕೂಡ ಆಗಿದ್ದು, ನಿನ್ನೆ ಸಂಜೆಯಿಂದಲೇ ಗ್ರಾಮಸ್ಥರು ಹುಡುಕಾಟ ನಡೆಸಿದರೂ ಪ್ರಯೋಜನವಾಗಲಿಲ್ಲ.ಆ.15 ರಂದು ಬೆಳಗ್ಗಿನಿಂದ ವಿಪತ್ತು ತಂಡ, ಅಗ್ನಿಶಾಮಕ ತಂಡದವರು, ಗ್ರಾಮಸ್ಥರು ಹುಡುಕಾಟವನ್ನು ನದಿ ಪರಿಸರದಲ್ಲಿ ನಡೆಸುತ್ತಿದ್ದಾರೆ.

ಇನ್ನೂ ಪತ್ತೆಯಾಗದ ಲೋಕೇಶ್: ಸ್ಥಳೀಯರು ಸುತ್ತಲಿರುವ ಕಾಡಿನಲ್ಲಿ ಹಾಗೂ ಅಗ್ನಿಶಾಮಕ ತಂಡ ಮತ್ತು ಶೌರ್ಯ ವಿಪತ್ತು ತಂಡದವರು ನದಿಯಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.

ಸ್ಥಳೀಯರ ಮಾತಿನಂತೆ ಲೋಕೇಶ್ ರವರಿಗೆ ಮೀನು ಹಿಡಿಯುವ ಹವ್ಯಾಸ ಇದ್ದು, ಉತ್ತಮ ಈಜುಗಾರರು ಆಗಿದ್ದು, ನೀರಿನಲ್ಲಿ ಮುಳುಗಿ ಸಾಯುವ ವ್ಯಕ್ತಿ ಅಲ್ಲ. ನದಿಯಲ್ಲಿ ಮೊಸಳೆ ಕೂಡ ಇದ್ದು ಸ್ಥಳೀಯರು ಆತಂಕ ವ್ಯಕ್ತ ಪಡಿಸುತ್ತಿದ್ದಾರೆ.

ಧರ್ಮಸ್ಥಳ ಪೋಲೀಸರು ಸ್ಥಳಕ್ಕಾಗಮಿಸಿ ಎಲ್ಲಾ ದಿಕ್ಕಿನಲ್ಲೂ ತನಿಖೆ ನಡೆಸುತ್ತಿದ್ದಾರೆ.

ಈ ವ್ಯಕ್ತಿ ಎಲ್ಲಿಯಾದರು ಕಂಡು ಬಂದಲ್ಲಿ ಈ ನಂಬರ್ ಗೆ ಕರೆ ಮಾಡಿ ತಿಳಿಸಿ 9480469279

LEAVE A REPLY

Please enter your comment!
Please enter your name here