

ದೊಂಡೋಲೆ: 77 ನೇ ಸ್ವಾತಂತ್ರ್ಯ ದಿನ ದ ಅಂಗವಾಗಿ ಧರ್ಮಸ್ಥಳದ ದೊಂಡೋಲೆ ಅಂಗನವಾಡಿ ಕೇಂದ್ರದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.

ಧ್ವಜಾರೋಹಣವನ್ನು ಡಾ.ಚಿರನ್ವಿ ಜೈನ ದೊಂಡೋಲೆ ನೇರವೇರಿಸಿದರು. ಬಳಿಕ ದೇಶಾಭಿಮಾನದ ಕುರಿತು ಕಿರಣ್ ದೊಂಡೋಲೆ ಮಾತನಾಡಿದರು.ಈ ಸಂದರ್ಭದಲ್ಲಿ ದೇಶದ ಏಕತೆ ಹಾಗೂ ಗೌರವದ ಕುರಿತು ಪ್ರಮಾಣವಚನ ಮಾಡಲಾಯಿತು.

ಈ ಸಂದರ್ಭದಲ್ಲಿ ಶಾಂತಿವನ ನೈತಿಕ ಶಿಕ್ಷಣದ ವಿದ್ಯಾರ್ಥಿಗಳು, ಪರಿಜಾತ ಜ್ಞಾನ ವಿಕಾಸ ದೊಂಡೋಲೆ ಸದಸ್ಯರು, ಶ್ರೀ ರಾಮ ಭಜನಾ ಮಂಡಳಿ ಅಧ್ಯಕ್ಷ ಶ್ರೀನಿವಾಸ ಭಟ್, ಸದಸ್ಯರು, ಸೂರ್ಯಪ್ರಕಾಶ್ ದೊಂಡೋಲೆ, ಅಂಗನವಾಡಿ ಶಿಕ್ಷಕಿ ಸುಮಿತ್ರಾ, ಹಾಗೂ ಮಕ್ಕಳು, ಪೋಷಕರು ಉಪಸ್ಥಿತರಿದ್ದರು.