ನಾಳ: ದ.ಕ.ಜಿ.ಪಂ.ಹಿ.ಪ್ರಾ. ಶಾಲಾ ಮಕ್ಕಳಿಗೆ ಕಲಿಕಾ ಸಾಮಾಗ್ರಿ ವಿತರಣೆ

0

ನಾಳ: ಆ.12ರಂದು ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಇದರ ವತಿಯಿಂದ ಶಾಲಾ ಮಕ್ಕಳಿಗೆ ಕಲಿಕಾ ಸಾಮಾಗ್ರಿಗಳನ್ನು ವಿತರಿಸಲಾಯಿತು.ಸಂಸ್ಥೆಯ ಉದ್ಯೋಗಿಗಳಾದ ಸವಿನಯ, ರಮೇಶ್ ಹಿಡಾಮಣಿ, ಮುದಿತ್ ಬನ್ಸಿಲ್ ಹಾಗೂ ಚಿರಾಗ್ ಶಿಲಾವಂತ್ ಇವರು ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಿಸಿ ಶುಭ ಹಾರೈಸಿದರು.

ಶಾಲಾ ಎಸ್.ಡಿ.ಯಂ.ಸಿಯ ಅಧ್ಯಕ್ಷರಾದ ಮೋಹನ್ ಗೌಡ ತಾರೆಮಾರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಉಪಾಧ್ಯಕ್ಷೆ ರೀತಾ ನಾಳ ಹಾಗೂ ಸದಸ್ಯರುಗಳಾದ ಸೋಮಪ್ಪ ಗೌಡ ಕುಬಾಯ, ಪುಷ್ಪಾ ನಾಳ ಉಪಸ್ಥಿತರಿದ್ದರು.

ಶಾಲಾ ಮುಖ್ಯ ಮುಖ್ಯೋಪಾಧ್ಯಯ ಪಿಲಿಪ್ ರೊನಾಲ್ಡ್ ಮೆಲ್ಲೊ ಎಲ್ಲರನ್ನೂ ಸ್ವಾಗತಿಸಿ, ಸಂಸ್ಥೆಯು ಮಾಡುತ್ತಿರುವ ಸಮಾಜಮುಖಿ ಕಾರ್ಯಕ್ರಮವನ್ನು ಶ್ಲಾಘಿಸಿ ಅಭಿನಂದಿಸಿದರು.ಸಹಶಿಕ್ಷಕಿ ಸಿಸಿಲಿಯಾ ಫ್ಲಾವಿಯಾ ಡಿಕೋಸ್ತರವರು ಕಾರ್ಯಕ್ರಮ ನಿರೂಪಿಸಿದರು.ಸಹಶಿಕ್ಷಕಿ ದಮಯಂತಿ.ಯಂ ರವರು ಧನ್ಯವಾದ ಅರ್ಪಿಸಿದರು.

ಸಹಶಿಕ್ಷಕಿ ಕವಿತಾ, ಜಲಜಾಕ್ಷಿ.ಪಿ ಹಾಗೂ ಗೌರವಶಿಕ್ಷಕಿ ಮೀನಾಕ್ಷಿಯವರು ಸಹಕರಿಸಿದರು.ಹರೀಶ್ ರಾವ್ ನಾಳ ಹಾಗೂ ಶ್ರೀ ಚಂದ್ರಶೇಖರ ರಾವ್ ಬೆಂಗಳೂರು ಇವರು ಸಂಸ್ಥೆಯ ಪ್ರಯೋಜನ ದೊರಕಿಸಿಕೊಡಲು ಮುತುವರ್ಜಿ ವಹಿಸಿದ್ದರು.

LEAVE A REPLY

Please enter your comment!
Please enter your name here