ಮುಂಡಾಜೆ: ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವನಮಹೋತ್ಸವ

0

ಮುಂಡಾಜೆ: ರಾಷ್ಟ್ರೀಯ ಪರಿಸರ ಒಕ್ಕೂಟ, ಯೂನಿವರ್ಸಲ್ ನಾಲೆಜ್ ಮಂಗಳೂರು, ಸಂತ ಅಲೋಶಿಯಸ್ ಕಾಲೇಜಿನ ನೇಚರ್ ಕ್ಲಬ್ ನ ಮಕ್ಕಳು ಹಾಗೂ ಅರಣ್ಯ ಇಲಾಖೆ ಸಹಯೋಗದೊಂದಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮುಂಡಾಜೆಯಲ್ಲಿ ವನಮಹೋತ್ಸವ ಆಚರಣೆ.

ಮೊದಲ ಹಂತದಲ್ಲಿ ಅಂದಾಜು 900 ಹಣ್ಣು ಹಂಪಲು ಗಿಡಗಳನ್ನು ನೆಡಲಾಯಿತು.ಪರಿಸರ ಒಕ್ಕೂಟದ ಕಾರ್ಯದರ್ಶಿ ಶಶಿಧರ ಶೆಟ್ಟಿ ಮಕ್ಕಳಿಗೆ ಪರಿಸರ ಸಂರಕ್ಷಣೆ ಕುರಿತು ಮಕ್ಕಳಿಗೆ ಮಾಹಿತಿ ನೀಡಿದರು.ಸ್ನೇಕ್ ಕಿರಣ್ ಪಿಂಟೋ ಹಾವುಗಳ ಸಂರಕ್ಷಣೆ ಬಗ್ಗೆ ಸಾಕ್ಷ ಚಿತ್ರ ಮೂಲಕ ಮಕ್ಕಳಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದರು ಹಾಗೂ ಶಾಲಾ ಪ್ರಾಂಶುಪಾಲ ಮುರಳೀಧರ ಸಹಕಾರ ನೀಡಿ ಅಧ್ಯಾಪಕ ಅರವಿಂದ ಚೊಕ್ಕಾಡಿ ಸ್ವಾಗತಿಸಿ ಹಾಗೂ ವಂದಿಸಿದರು.

ಸ್ಥಳೀಯ ಪಂಚಾಯತ್ ಹಾಗೂ ಊರವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

LEAVE A REPLY

Please enter your comment!
Please enter your name here