

ಉಜಿರೆ: ಅನುಗ್ರಹ ಆಂಗ್ಲ ಮಾಧ್ಯಮ ಶಾಲೆ ಮತ್ತು ಕಪುಚಿನ್ ಕೃಷಿಕ ಕೇಂದ್ರ, ದಯಾಳ್‌ಬಾಗ್ ಇದರ ಜಂಟಿ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಭತ್ತದ ನಾಟಿಯ ಪ್ರಾತ್ಯಕ್ಷಿಕೆ ನಡೆಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಪೂಜ್ಯ ರೆ!ಫಾ! ಫೆಡ್ರಿಕ್ ಬ್ರ್ಯಾಕ್ಸ್ ರವರು ಭತ್ತದ ನಾಟಿಯ ರೀತಿ ಮತ್ತು ಅದನ್ನು ಬೆಳೆಸುವ ಬಗ್ಗೆ ಮಾಹಿತಿಯನ್ನು ನೀಡಿದರು.
ಶಾಲಾ ಪ್ರಾಂಶುಪಾಲರಾದ ರೆ! ಫಾ! ವಿಜಯ್ ಲೋಬೊರವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.ಅದೇ ರೀತಿ ಶಾಲೆಯ ಇಕೋ-ಕ್ಲಬ್ ನ್ನು ಉದ್ಘಾಟಿಸಲಾಯಿತು.ಕಾರ್ಯಕ್ರಮವನ್ನು ವಿದ್ಯಾರ್ಥಿನಿಯಾದ ಗಾಯನ ನಿರೂಪಿಸಿ, ಶಾರನ್ ಇಕೋ-ಕ್ಲಬ್ ನ ಬಗ್ಗೆ ಮಾತನಾಡಿ, ಶ್ರೀ ಗೌರಿ ಧನ್ಯವಾದಗೈದಳು.ಇಕೋ ಕ್ಲಬ್ ನ ನಿರ್ದೇಶಕಿ ಶಿಕ್ಷಕಿ ಹೇಮಾಲತಾ ಸಹಕರಿಸಿದರು.