ಬೆಳ್ತಂಗಡಿ: ಸೌಜನ್ಯಳಿಗೆ ನ್ಯಾಯ ಸಿಗಲೆಂದು ವಿಶ್ವ ಹಿಂದೂ ಪರಿಷತ್ ಬಜರಂಗದಳ ಹಾಗೂ ಶಾಸಕ ಹರೀಶ್ ಪೂಂಜರಿಂದ ಕುತ್ಯಾರು ಸೋಮನಾಥೇಶ್ವರ ದೇವರಿಗೆ ವಿಶೇಷವಾಗಿ ಪ್ರಾರ್ಥನೆ ಸಲ್ಲಿಸಿ, ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಬೇಕು ಮತ್ತು ಸೌಜನ್ಯಾಳಿಗೆ ನ್ಯಾಯ ಸಿಗಬೇಕು ಎಂದು ಪ್ರಾರ್ಥನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಅಧ್ಯಕ್ಷ ದಿನೇಶ್ ಚಾರ್ಮಾಡಿ, ಉಪಾಧ್ಯಕ್ಷ ಸತೀಶ್, ಸಂಚಾಲಕ ಸಂತೋಷ್ ಅತ್ತಾಜೆ, ಕಾರ್ಯದರ್ಶಿ ಮೋಹನ್ ಬೆಳ್ತಂಗಡಿ, ಗೋ ರಕ್ಷಣ ಪ್ರಮುಖ್ ರಮೇಶ್, ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಸುಧೀರ್ ಚಾರ್ಮಾಡಿ, ಗುರು ಲಾಯಿಲ ಮತ್ತಿತರು ಉಪಸ್ಥಿತರಿದ್ದರು.
p>