ಬೆಳ್ತಂಗಡಿ: ಮಹಿಳಾ ಮತ್ತು ಮcಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಬೆಳ್ತಂಗಡಿ, ತಾಲೂಕು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮತ್ತು ತಾಲೂಕು ಸ್ತ್ರೀ ಶಕ್ತಿ ಬ್ಲಾಕ್ ಸೊಸೈಟಿ ಇವರ ಸಂಯುಕ್ತ ಆಶ್ರಯದಲ್ಲಿ ಆ.2ರಂದು ಬೆಳ್ತಂಗಡಿ ಸ್ತ್ರೀ ಶಕ್ತಿ ಭವನದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ನಡೆಯಿತು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಿಯಾ ಅಗ್ನೇಸ್ ಚಾಕೋ ಕಾರ್ಯಕ್ರಮ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿ ದುಡಿಮೆಯಲ್ಲಿರುವ ಪಾಲಕರಿಗೆ ಸ್ತನ್ಯ ಪಾನದಲ್ಲಿ ಸಕ್ರಿಯ ಗೊಳಿಸಲು ಬದಲಾವಣೆಯನ್ನು ಉಂಟು ಮಾಡುವುದು ಎಂಬ ಘೋಷ ವಾಕ್ಯ ಹಾಗೂ ಸ್ತನ್ಯ ಪಾನ ಸಪ್ತಾಹ ಆ.1 ರಿಂದ 7 ರ ವರೆಗೆ ವಿಶ್ವಾದ್ಯ0ತ ಆಚರಣೆ ಮಾಡುವ ಉದ್ದೇಶ, ಮಗುವಿಗೆ ಎದೆ ಹಾಲು ಕೊಡುವ ವಿಧಾನ ಕುಟುಂಬದ ಪಾತ್ರ ಮಗುವಿನ ಮೊದಲ 1000ದಿನಗಳ ಆರೈಕೆ ಇತ್ಯಾದಿಗಳ ಬಗ್ಗೆ ಮಾಹಿತಿ ನೀಡಿದರು.ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಅಮ್ಮಿ ಕೆ.ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಮಗುವಿಗೆ ಎದೆ ಹಾಲು ಉಣಿಸುವಲ್ಲಿ ಇರುವ ತೊಡಕುಗಳ ನಿವಾರಿಸುವಲ್ಲಿ ಜನಜಾಗೃತಿ ನೀಡುವ ಬಗ್ಗೆ ತಿಳಿಸಿದರು.
ಸ್ತ್ರೀ ಶಕ್ತಿ ಬೆಳ್ತಂಗಡಿ ಬ್ಲಾಕ್ ಸೊಸೈಟಿ ಅಧ್ಯಕ್ಷೆ ನಿಶಾ ಶುಭ ಹಾರೈಸಿದರು ಲೀಲಾ ಪ್ರಾರ್ಥಿಸಿ ಮೇಲ್ವಿಚಾರಕಿ ನಾಗವೇಣಿ ಸ್ವಾಗಟಿಸಿ ವಿನೋದ ನಿರೂಪಿಸಿದರು ಹಿರಿಯ ಮೇಲ್ವಿಚಾರಕಿ ರತ್ನಾವತಿ ಪಿ. ವಂದಿಸಿದರು. ಕಾರ್ಯಕ್ರಮದಲ್ಲಿ ತಾಲೂಕಿನ ಅಂಗನವಾಡಿ ಕಾರ್ಯಕರ್ತರು, ಸ್ತ್ರೀ ಶಕ್ತಿ ಬ್ಲಾಕ್ ಸೊಸೈಟಿ ಪದಾಧಿಕಾರಿಗಳು, ತಾಯಂದಿರು ಉಪಸ್ಥಿತರಿದ್ದರು.