ಉಜಿರೆ: ಶ್ರೀ ಧ.ಮಂ.ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಓರಿಯಂಟೇಶನ್ ಕಾರ್ಯಕ್ರಮ

0

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆ ಇಲ್ಲಿ 2023-24 ನೇ ಸಾಲಿಗೆ ದಾಖಲಾತಿ ಪಡೆದುಕೊಂಡ ವಿದ್ಯಾರ್ಥಿನಿಯರಿಗೆ ಓರಿಯಂಟೇಶನ್ ಕಾರ್ಯಕ್ರಮವನ್ನು ಆ.01ರಂದು ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮವನ್ನು ಸೋನಿಯಾ ವರ್ಮ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ವಿದ್ಯೆ ಜ್ಞಾನವನ್ನು ಹೆಚ್ಚಿಸುವ ಮೂಲಕ ಸಮಾಜದಲ್ಲಿ ಉತ್ತಮ ರೀತಿಯಿಂದ ಬದುಕಲು ಅವಕಾಶ ಮಾಡಿ ಕೊಡುತ್ತದೆ.ಸಿಕ್ಕಿದ ಸಮಯವನ್ನು ಅವಕಾಶವಾಗಿ ಉಪಯೋಗಿಸಿ, ಹಿಂದೆ ಅಕ್ಷರ ಜ್ಞಾನ ಇಲ್ಲದವ ಅನಕ್ಷರಸ್ಥ ಎಂದು ಹೇಳುತ್ತಿದ್ದರು ಇಂದು ಕಂಪ್ಯೂಟರ್ ಜ್ಞಾನ ಇಲ್ಲವಾದರೆ ಅನಕ್ಷರಸ್ಥ ಹಾಗೂ ದುಡಿಯಲು ಅಸಾಧ್ಯ ಅಷ್ಟೇ ಅಲ್ಲ ಅದಕ್ಕಿಂತ ಹೆಚ್ಚು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕುರಿತು ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ ಇನ್ನೂ ಉತ್ತಮ.ಸಿಕ್ಕಿದ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ದಿನದಿಂದ ದಿನಕ್ಕೆ ಹೊಸತನದ ಕುರಿತು ಮಾಹಿತಿ ತೆಗೆದುಕೊಳ್ಳಿ. ಎಸ್ ಡಿ ಎಂ ಶಿಕ್ಷಣ ಸಂಸ್ಥೆ ಈ ನಿಟ್ಟಿನಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಸತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ ಸುನೀಲ್ ಪಂಡಿತ್ ಇವರು ಮಾತನಾಡಿ ನೀವು ಕಲಿಯುವುದು ಮಾತ್ರವಲ್ಲದೆ ಉಜ್ವಲ ಭವಿಷ್ಯಕ್ಕಾಗಿ ಇಲ್ಲಿ ಮಾರ್ಗದರ್ಶನ ನೀಡಲಾಗುವುದು.ಎಲ್ಲಾ ವಿದ್ಯಾರ್ಥಿಗಳನ್ನು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು, ನೆಟ್‌ವರ್ಕಿಂಗ್ ಕೌಶಲ್ಯಗಳನ್ನು ಬೆಳೆಸಲು ಪ್ರೋತ್ಸಾಹಿಸುತ್ತೇನೆ. ನಿಮ್ಮ ಪಠ್ಯಕ್ರಮದ ಅಂತ್ಯದ ವೇಳೆಗೆ, ನೀವು ನಮ್ಮ ಸಂಸ್ಥೆಯ ಉತ್ತಮ ಆವೃತ್ತಿಯಾಗಿ ಹೊರಹೊಮ್ಮುತ್ತೀರಿ.ಹೆಣ್ಣು ಮಕ್ಕಳು ಧೈರ್ಯದಿಂದ ಸಾಧನೆ ಮಾಡಬೇಕು ವೃತ್ತಿಯನ್ನು ಪ್ರೀತಿಸಿ, ಗೌರವಿಸಬೇಕು ಮತ್ತು ಆಸಕ್ತಿಯಿಂದ ಕೆಲಸಗಳನ್ನು ಮಾಡಿ ಸಮಾಜದಲ್ಲಿ ಅನೇಕ ಹೆಣ್ಣು ಮಕ್ಕಳು ಅನೇಕ ಉತ್ತಮ ಹುದ್ದೆಗಳನ್ನು ದೈರ್ಯದಿಂದ ನಿರ್ವಹಿಸಿದ ಘಟನೆಗಳ ಕುರಿತು ಮಾಹಿತಿ ನೀಡಿ, ಅವರಂತೆ ನಾವು ಆಗಲು ಪ್ರಯತ್ನ ಮಾಡೋಣವೆಂದು ಹೇಳಿ ವಿದ್ಯಾರ್ಥಿನಿಯರಿಗೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಪ್ರಾಂಶುಪಾಲರಾದ ವಿ.ಪ್ರಕಾಶ್ ಕಾಮತ್ ಇವರು ಸಂಸ್ಥೆಯ ಕುರಿತು ಮಾಹಿತಿ ನೀಡಿ ವಿದ್ಯಾರ್ಥಿನಿಯರ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದರು.ಸುಮಂಗಲಾ ಜೈನ್ ಇವರು ಸ್ವಾಗತಿಸಿದ ಈ ಕಾರ್ಯಕ್ರಮದಲ್ಲಿ ಸಂಧ್ಯಾ ಕಾರ್ಯಕ್ರಮ ನಿರೂಪಿಸಿ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.

LEAVE A REPLY

Please enter your comment!
Please enter your name here