ಅಳದಂಗಡಿ ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ಶಿಥಿಲಗೊಂಡ ಮನೆ ಛಾವಣಿ ತೆರವು

0

ಅಳದಂಗಡಿ: ಅಳದಂಗಡಿ ವಲಯ ವ್ಯಾಪ್ತಿಯ ನಾವರ ಗ್ರಾಮದ ಉಂಬುಜೆ ಎಂಬಲ್ಲಿ ಕೊರಗಪ್ಪ ಮಲೆಕುಡಿಯ ದಂಪತಿಗಳ ಮನೆಯ ಮೇಲ್ಚಾವಣಿಯು ತೀರ ದುಸ್ಥಿತಿಯಲ್ಲಿದ್ದು ಯಾವುದೇ ಸಮಯದಲ್ಲಿ ಬಿದ್ದು ಹೋಗುವ ಪರಿಸ್ಥಿತಿಯಲ್ಲಿತ್ತು.ದಂಪತಿಗಳಿಬ್ಬರು ಅನಾರೋಗ್ಯದಿಂದ ಬಳಲುತ್ತಿದ್ದು ಸ್ವತಂತ್ರವಾಗಿ ಯಾವುದೇ ಕೆಲಸಗಳನ್ನು ನೆರವೇರಿಸುವಲ್ಲಿ ಅಸಹಾಯಕರಾಗಿದ್ದರು.ದಂಪತಿಗಳಿಬ್ಬರನ್ನು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಪಕ್ಕದ ಮನೆಯವರು ಕಳುಹಿಸಿದ್ದು ಮನೆ ಖಾಲಿ ಆಗಿತ್ತು.

ಇದೇ ಸಂದರ್ಭದಲ್ಲಿ ಮನೆಯ ದುರಸ್ತಿ ಕಾರ್ಯ ಮಾಡುವುದು ಒಳಿತೆಂದು ಮನಗಂಡು ವೃದ್ಧರ ಆರೈಕೆಯನ್ನು ಮಾಡುತ್ತಿದ್ದ ಅವರ ಸಹೋದರ ಸಂಬಂಧಿಗಳು ಮನೆಯ ಛಾವಣಿ ತೆರವುಗೊಳಿಸುವಲ್ಲಿ ವಿಪತ್ತು ನಿರ್ವಹಣಾ ಸ್ವಯಂ ಸೇವಕರ ನೆರವನ್ನು ಕೋರಿ ಮನವಿಯನ್ನು ಸಲ್ಲಿಸಿದ್ದರು.

ವಿಷಯವನ್ನು ವಲಯ ಮೇಲ್ವಿಚಾರಕರು ಹಾಗೂ ಯೋಜನಾಧಿಕಾರಿಗಳ ಗಮನಕ್ಕೆ ತಂದು ಜು.31ರಂದು ಮೇಲ್ಚಾವಣಿಯ ತೆರವು ಕಾರ್ಯವನ್ನು ನಿರ್ವಹಿಸಿದರು.

ಘಟಕ ಪ್ರತಿನಿಧಿ ರಾಜೇಶ್ ಹಾಗೂ ಶಕುಂತಲಾ ಸ್ವಯಂ ಸೇವಕರಾದ ಪ್ರಕಾಶ್ ಕೊಲ್ಲಂಗೆ, ಶಿವಾನಂದ, ಶ್ರೀಕಾಂತ್, ಸರಸ್ವತಿ, ಹೇಮಾವತಿ, ಅಮಿತಾ ಹಾಗೂ ನಳಿನಿ ಸ್ವಯಂಸೇವಕರು ಭಾಗವಹಿಸಿದರು.ಸ್ವಯಂ ಸೇವಕರೊಂದಿಗೆ ಈ ಕಾರ್ಯದಲ್ಲಿ ಸೋದರ ಸಂಬಂಧಿಗಳು ಸಹಕರಿಸಿದರು.ಸೇವಾ ಪ್ರತಿನಿಧಿ ಕುಮಾರಿ ಸುಲೋಚನಾರವರು ಸ್ಥಳದಲ್ಲಿ ಉಪಸ್ಥಿತರಿದ್ದರು.

p>

LEAVE A REPLY

Please enter your comment!
Please enter your name here