ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ, ಯುವ ಬಿಲ್ಲವ ವೇದಿಕೆ, ಮಹಿಳಾ ಬಿಲ್ಲವ ವೇದಿಕೆ ಕುವೆಟ್ಟು, ಓಡಿಲ್ನಾಳ ಗ್ರಾಮ ಸಮಿತಿ ಇದರ ಆಶ್ರಯದಲ್ಲಿ ಆಟಿಡೊಂಜಿ ಕೂಟ

0

ಬೆಳ್ತಂಗಡಿ: ಆಟಿ ತಿಂಗಳು ಬಹಳ ಕಷ್ಟಗಳ ದಿನಗಳಾಗಿದ್ದು ಜೀವನದ ನಿರ್ವಾಹಣೆಯೇ ಸವಾಲಾಗಿತ್ತು.ಹೀಗಾಗಿ ಜನ ಹಳ್ಳಿಯಲ್ಲೇ ಸಿಗುವ ವಸ್ತುಗಳನ್ನು ಆಹಾರವಾಗಿ ಬಳಸುತ್ತಿದ್ದು ಅದರಲ್ಲಿ ಔಷಧಿಯ ಗುಣಗಳೂ ಇರುತ್ತಿತ್ತು.ಇಂತಹ ವಿಚಾರವನ್ನು ನಮ್ಮ ಮಕ್ಕಳಿಗೆ ಆಟಿದ ಕೂಟ ಕಾರ್ಯಕ್ರಮದಲ್ಲಿ ತಿಳಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಮಾಜಿ ಶಾಸಕ ಕೆ.ವಸಂತ ಬಂಗೇರ ತಿಳಿಸಿದರು.ಅವರು ಜು.30 ರಂದು ಶ್ರೀ ಗುರುನಾರಾಯಣ ಸ್ಸಾಮಿ ಸೇವಾ ಸಂಘ, ಯುವ ಬಿಲ್ಲವ ವೇದಿಕೆ, ಮಹಿಳಾ ಬಿಲ್ಲವ ವೇದಿಕೆ ಕುವೆಟ್ಟು, ಓಡಿಲ್ನಾಳ ಗ್ರಾಮ ಸಮಿತಿ ಇದರ ಆಶ್ರಯದಲ್ಲಿ ಆದೇಲು ಚಂದಯ್ಯ ಪೂಜಾರಿಯವರ ಮನೆಯ ವಠಾರದಲ್ಲಿ ಜರಗಿದ ಆಟಿಡೊಂಜಿ ಕೂಟ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದರು.

ಆಟಿದ ಕೂಟ ಆಚರಣೆಯ ಮಹತ್ವದ ಬಗ್ಗೆ ಬೆಳ್ತಂಗಡಿ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಾಹಣಾದಿಕಾರಿ ಅಶ್ವಥ್ ಕುಮಾರ್ ಮಾತನಾಡಿ ನಮ್ಮ ಹಿರಿಯರು ಆಟಿಯ ಆಚರಣೆಗಳನ್ನು ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಯುವ ಜನಾಂಗ ಮುಂದುವರಿಸಿದರೆ ಸಂಪ್ರದಾಯ ಬೆಳೆಯಲಿದೆ ಎಂದರು.

ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಕುವೆಟ್ಟು ಓಡಿಲ್ನಾಳ ಗ್ರಾಮ ಸಮಿತಿಯ ಆಧ್ಯಕ್ಷ ಚಂದ್ರಶೇಖರ ಕೋಟ್ಟಾನ್ ಸಬರಬೈಲು ಅಧ್ಯಕ್ಷತೆ ವಹಿಸಿದ್ದರು.ಬೆಳ್ತಂಗಡಿ ತಾಲೂಕು ಶ್ರೀ ಗುರುನಾರಾಯಣ ಸೇವಾ ಸಂಘದ ಅಧ್ಯಕ್ಷ ಚಿದಾನಂದ ಎಲ್ದಡ್ಕ, ಕುವೆಟ್ಟು ಯುವ ಬಿಲ್ಲವ ವೇದಿಕೆಯ ಅಧ್ಯಕ್ಷ ಅನೂಪ್ ಬಂಗೇರ, ಮಹಿಳಾ ಬಿಲ್ಲವ ವೇದಿಕೆಯ ಅಧ್ಯಕ್ಷೆ ಜಯಂತಿ ಜಾಲಿಯರಡ್ಡ, ರವಿ ಪೂಜಾರಿ ಆದೇಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಹಿರಿಯರಾದ ರುಕ್ಮಯ ಪೂಜಾರಿ ಆದೇಲು ದೀಪ ಬೆಳಗಿಸಿ ಉದ್ಘಾಟಿಸಿದರು.ಅಟೋಟ ಸ್ಪರ್ಧೆಯನ್ನು ವೆಂಕಮ್ಮ ಚಂದಯ್ಯ ಪೂಜಾರಿ ಚೆನ್ನೆದ ಮಣೆ ಆಟ ಆಡುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಸತೀಶ್ ಬಂಗೇರ ಕುವೆಟ್ಟು, ಪ್ರಧಾನ ಕಾರ್ಯದರ್ಶಿ ಆನಂದ ಕೋಟ್ಯಾನ್ ಗುರುವಾಯನಕೆರೆ, ದರ್ಣಪ್ಪ ಪೂಜಾರಿ, ಲಲಿತಾ ಆದೇಲು ಉಪಸ್ಥಿತರಿದ್ದರು.

ಶಾಂತಾ ಜೆ ಬಂಗೇರ, ಧನಲಕ್ಷ್ಮಿ ಚಂದ್ರಶೇಖರ್ ಸಬರಬೈಲು, ಹರೀಶ್ ಕೋಟ್ಟಾನ್ ಮದ್ದಡ್ಕ ಇವರ ನೇತೃತ್ವದಲ್ಲಿ ಮಕ್ಕಳಿಗೆ ಮಹಿಳೆಯರಿಗೆ, ಪುರುಷರಿಗೆ ವಿವಿಧ ಅಟೋಟ ಸ್ಪರ್ಧೆ ನಡೆಸಿ ಬಹುಮಾನ ವಿತರಿಸಲಾಯಿತು.ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಮಕ್ಕಳನ್ನು ಗೌರವಿಸಲಾಯಿತು.ಸ್ಥಳೀಯ ಪ್ರತಿಭೆಗಳಿಂದ ನ್ರತ್ಯ ಕಾರ್ಯಕ್ರಮ ಜರಗಿತು.

ಸಂಘದ ಸಲಹೆಗಾರರು, ಮಾಜಿ ಅಧ್ಯಕ್ಷರು, ಪಧಾದಿಕಾರಿಗಳು ಕಾರ್ಯಕ್ರಮದ ಯಶಶ್ವಿಗೆ ಸಹಕರಿಸಿದರು.ಆನಂದ ಕೋಟ್ಯಾನ್ ಸ್ವಾಗತಿಸಿ, ನಿತೇಶ್ ಅದೇಲು ಮತ್ತು ಉಮೇಶ್ ಮದ್ದಡ್ಕ ಕಾರ್ಯಕ್ರಮ ನಿರೂಪಿಸಿದರು.ಪ್ರ‌ಜ್ಙಾ ಓಡಿಲ್ನಾಳ ಧನ್ಯವಾದವಿತ್ತರು.ಸುಮಾರು 50 ಬಗೆಯ ವಿವಿದ ಖಾದ್ಯಗಳಿಂದ ಕೂಡಿದ ಭೋಜನ ಸವಿದರು.

p>

LEAVE A REPLY

Please enter your comment!
Please enter your name here