



ಇಂದಬೆಟ್ಟು: ತಾಲೂಕಿನ ಹೆಸರಾಂತ ಯುವ ಸಂಘಟನೆ ಕಳೆದ 10 ವರ್ಷಗಳಿಂದ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಆರೋಗ್ಯ ಹಾಗೂ ಕ್ರೀಡಾ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ನವಭಾರತ್ ಗೆಳೆಯರ ಬಳಗದ ವತಿಯಿಂದ ಜುಲೈ 30 ರಂದು ಇಂದಬೆಟ್ಟು ಕಲ್ಲಾಜೆ ಶಾಲೆಯಲ್ಲಿ ಆಟಿಡೊಂಜಿ ದಿನ ಹಾಗೂ ವಿದ್ಯಾ ನಿಧಿ ವಿತರಣಾ ಕಾರ್ಯಕ್ರಮವು ನಡೆಯಿತು.

ಸಮಾರಂಭದ ಉದ್ಘಾಟನೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಆನಂದ ಕೊಪ್ಪದಕೋಡಿ ರವರು ದೀಪ ಬೆಳಗಿಸಿ ಉದ್ಘಾಟಿಸಿದರು.


ಈ ಸಂದರ್ಭದಲ್ಲಿ ನವಭಾರತ್ ಗೆಳೆಯರ ಬಳಗವು ಸರ್ಕಾರಿ ಹಿರಿಯ ಪ್ರಾಥಮಿಕ ಕಲ್ಲಾಜೆ ಶಾಲೆಯಲ್ಲಿ ಒಂದನೇ ತರಗತಿಗೆ ದಾಖಲಾಗುವ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯ ಯೋಜನೆ ನವಭಾರತ್ ವಿದ್ಯಾನಿಧಿಯನ್ನು ಸಂಘದ ಪದಾಧಿಕಾರಿಗಳು ಶಾಲಾಭಿವೃದ್ಧಿ ಸಮಿತಿ ಅಧ್ಯಕರಿಗೆ ಹಾಗೂ ಶಿಕ್ಷಕರಿಗೆ ವಿತರಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶಾಲಾ ಶಿಕ್ಷಕಿ ದೀಪಾ ಕಿರಣ್ ಮಾತಾಡಿ ವಿದ್ಯಾನಿಧಿ ಯೋಜನೆಗೆ ಧನ್ಯವಾದ ತಿಳಿಸಿದರು.ಅಧ್ಯಕ್ಷತೆಯನ್ನು ನವಭಾರತ್ ಗೆಳೆಯರ ಬಳಗದ ಅಧ್ಯಕ್ಷರಾದ ಅಶ್ವತ್ಥ್ ರಾಜ್ ಕಲ್ಲಾಜೆ ವಹಿಸಿದ್ದರು, ಗೌರವ ಅಧ್ಯಕ್ಷರಾದ ಅರುಣ್ ಕುಮಾರ್ ಕೆಳಗಿನ ಕಲ್ಲಾಜೆ, ಕಾರ್ಯದರ್ಶಿ ಸುಕೇಶ್ ನಡುಮನೆ, ಕೋಶಾಧಿಕಾರಿ ಯತೀಶ್ ನೆರೋಲ್ದ ಪಲ್ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಂತರ ನಡೆದ ವಿವಿಧ ಕ್ರೀಡೆಗಳಲ್ಲಿ ಸಂಘದ ಸದಸ್ಯರು, ಊರವರು, ಮಹಿಳೆಯರು ಹಾಗೂ ಮಕ್ಕಳು ಭಾಗವಹಿಸಿದ್ದರು, ಮಧ್ಯಾಹ್ನ ಸವಿ ರುಚಿಯಾದ ಭೋಜನ ಏರ್ಪಡಿಸಲಾಗಿತ್ತು.


            





