ನಡ: ಸ.ಪ.ಪೂ ಕಾಲೇಜಿನಲ್ಲಿ ಕಾರ್ಗಿಲ್ ವಿಜಯೋತ್ಸವ ಆಚರಣೆ

0

ನಡ: ನಡ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಲ್ಪನಾ ಚಾವ್ಲಾ ರೇಂಜರ್ಸ್ ಘಟಕದ ವತಿಯಿಂದ ಕಾರ್ಗಿಲ್ ವಿಜಯೋತ್ಸವ ದಿನವನ್ನು ಆಚರಿಸಲಾಯಿತು.ರೇಂಜರ್ ಲೀಡರ್ ವಸಂತಿ ಪಿ.ಕಾರ್ಗಿಲ್ ಯೋಧರ ಸಾಹಸ ಗಾಥೆಗಳನ್ನು ವಿವರಿಸುತ್ತಾ ನಾವು ಯೋಧರ ತ್ಯಾಗ ಬಲಿದಾನಗಳಿಗೆ ಯಾವತ್ತೂ ಕೃತಜ್ಞರಾಗಿರಬೇಕೆಂದರು.

ಯುದ್ಧ ಕಲಿಗಳಾದ ವಿಕ್ರಂ ಭಾತ್ರ, ನವೀನ್ ನಾಗಪ್ಪ, ಮನೋಜ್ ಪಾಂಡೆ, ಸೌರಭ್ ಖಾಲಿಯ ಬದುಕಿನ ಸಾಧನೆಗಳನ್ನು ರೇಂಜರ್ ವಿದ್ಯಾರ್ಥಿನಿಯರಾದ ಮೇಘನಾ, ನಿಶ್ಮಿತಾ, ನಿರೀಕ್ಷಾ, ‌ಸವಿತಾ ಸಾದರಪಡಿಸಿದರು.ಕಾರ್ಗೀಲ್ ಸಂಬಂಧಿತ ದೇಶಭಕ್ತಿ ಗೀತೆಗಳನ್ನು ಹಾಡಿದರು.ನಿಖಿತಾ ನಿರೂಪಿಸಿ, ಶ್ವೇತಾ ಸ್ವಾಗತಿಸಿ, ಸುಪ್ರೀತಾ ವಂದಿಸಿದರು.

LEAVE A REPLY

Please enter your comment!
Please enter your name here