ಬಳಂಜ: ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ನಾಲ್ಕೂರಿನಲ್ಲಿ ಧರೆ ಕುಸಿದು ಮನೆಗೆ ಹಾನಿ

0

ಬಳಂಜ: ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಬಳಂಜ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಾಲ್ಕೂರು ಕರಂಬಿತ್ತಿಲ್ ಶೇಖರ್ ಶೆಟ್ಟಿಯವರ ಮನೆ ಪಕ್ಕದ ದೊಡ್ಡ ಧರೆಯೊಂದು ಕುಸಿದು ಹತ್ತಿರದಲ್ಲೇ ನೂತನವಾಗಿ ನಿರ್ಮಿಸಿದ ಮನೆಯ ಸುತ್ತ ಬಿದ್ದು ಮನೆಗೆ ಭಾಗಶಃ ಹಾನಿಯಾಗಿದೆ.

ಮಳೆ ಇದೇ ರೀತಿ ಮುಂದುವರಿದರೆ ಇಲ್ಲಿನ ಧರೆಯು ಇನ್ನಷ್ಟು ಕುಸಿಯುವ ಭೀತಿ ಎದುರಾಗಿದ್ದು ಮನೆಯವರು ಆತಂಕಲ್ಲಿದ್ದಾರೆ.

ಗ್ರಾಮ ಪಂಚಾಯತ್ ನವರು ತಕ್ಷಣವೇ ಭೇಟಿ ನೀಡಿ ಕ್ರಮ ಕೈಗೊಳ್ಳಬೇಕಾಗಿದೆ.

LEAVE A REPLY

Please enter your comment!
Please enter your name here