ಬೆಳ್ತಂಗಡಿ: ಸಂತ ತೆರೆಸಾ ಪ್ರೌಢಶಾಲೆಯಲ್ಲಿ ಜೇಸಿ ಬೆಳ್ತಂಗಡಿ ಮಂಜುಶ್ರೀ ಘಟಕ ಹಾಗೂ ಹಿರಿಯ ವಿದ್ಯಾರ್ಥಿ ಸಂಘ ಸಂತ ತೆರೆಸಾ ಪ್ರೌಢಶಾಲೆ ಬೆಳ್ತಂಗಡಿ ಇವರ ಸಹಯೋಗದೊಂದಿಗೆ ವನಮಹೋತ್ಸವ ಕಾರ್ಯಕ್ರಮ ಜು.22ರಂದು ಫಲ ಪುಷ್ಪ ಗಿಡಗಳ ವಿತರಣೆ ಮಾಡುವ ಮೂಲಕ ಆಚರಿಸಲಾಯಿತು.
ಜೆಸಿಐ ಅಧ್ಯಕ್ಷರು ಜೆ.ಸಿ ಶಂಕರ್ ರಾವ್, ಹಿರಿಯ ವಿದ್ಯಾರ್ಥಿ ಸಂಘದ ಉಪಾದ್ಯಕ್ಷರು ಜೆ.ಸಿ ನಾರಾಯಣ್ ಶೆಟ್ಟಿ, ಜೆ.ಸಿ ಕಾರ್ಯದರ್ಶಿ ಜೆ.ಸಿ ಸುಧೀರ್ ಕೆ.ಎನ್ ಹಾಗೂ ಶಾಲಾ ಮುಖ್ಯೋಪಾದ್ಯಾಯಿನಿ ವಂದನೀಯ ಭಗಿನಿ ಲೀನಾ ಡಿಸೋಜಾ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದರು.ಜೇಸಿ ಅದ್ಯಕ್ಷರು ಶಂಕರ್ ರಾವ್ ರವರು ಗಿಡಗಳನ್ನು ವಿತರಿಸಿ ವೃಕ್ಷಗಳ ಮಹತ್ವದ ಬಗ್ಗೆ ತಿಳಿಸಿದರು.
ಇದೇ ಶಾಲೆಯ ವಿದ್ಯಾರ್ಥಿಯಾಗಿ ವೇದಿಕೆಯನ್ನು ಅಲಂಕರಿಸುವ ಭಾಗ್ಯ ತನ್ನದು ಎಂದು ಹೇಳುತ್ತಾ ಕೆಲವು ಮರೆಯಲಾಗದ ಕ್ಷಣಗಳನ್ನು ಮೆಲುಕು ಹಾಕಿದರು.ಜೇಸಿ ನಾರಾಯಣ್ ಶೆಟ್ಟಿಯವರು ಗಿಡಗಳನ್ನು ವಿತರಿಸಲು ಸರ್ವ ತಯಾರಿಯನ್ನು ಮಾಡಿದ್ದರು.ಶಿಕ್ಷಕಿ ಉಮ್ಮಕ್ಕರವರು ಪರಿಸರ ಸಂರಕ್ಷಣೆಯ ಬಗ್ಗೆ ಕಿರುನಾಟಕ, ಹಾಡು, ಭಾಷಣ ನೃತ್ಯಗಳ ಮೂಲಕ ವಿದ್ಯಾರ್ಥಿಗಳನ್ನು ತರಬೇತುಗೊಳಿಸಿ ವೇದಿಕೆಯಲ್ಲಿ ಉತ್ತಮವಾಗಿ ಪ್ರದರ್ಶಿಸಿದರು.
ಮುಬಾಶಿರಾ ಕಾರ್ಯಕ್ರಮ ನಿರೂಪಿಸಿ, ಹರ್ಷಿತಾ ವಂದಿಸಿದರು.ಶಾಲಾ ಮುಖ್ಯೋಪಾಧ್ಯಯಿನಿಯವರು ವಿದ್ಯಾರ್ಥಿಗಳಿಗೆ ಶುಭ ಕೋರಿದರು.