ಪುಂಜಾಲಕಟ್ಟೆ: ಜು.19ರಂದು ಕೆ.ಪಿ.ಎಸ್. ಪುಂಜಾಲಕಟ್ಟೆ ಇಲ್ಲಿನ ಪದವಿಪೂರ್ವವಿಭಾಗದ ವಿದ್ಯಾರ್ಥಿಸಂಘವನ್ನು ಉದ್ಘಾಟಿಸಿ, ಶ್ರೀ ವಿಠಲ್, ಎ. ಪ್ರಾಂಶುಪಾಲರು, ಕಿಟೈಲ್ ಸ್ಮಾರಕ ಪದವಿಪೂರ್ವ ಕಾಲೇಜು ಗೋರಿಗುಡ್ಡ ಮಂಗಳೂರು, ಇವರು ನಾಯಕತ್ವ ಗುಣಬೆಳೆಸಿಕೊಳ್ಳುವಲ್ಲಿ ವಿದ್ಯಾರ್ಥಿಸಂಘದ ಚುನಾವಣೆ ನಿರ್ಣಾಯಕ ಪಾತ್ರ ವಹಿಸುತ್ತದೆ. ವಿದ್ಯಾರ್ಥಿದೆಸೆಯಲ್ಲೇ ನಾಯಕತ್ವದ ಗುಣ ರೂಢಿಸಿಕೊಳ್ಳಿ ಎಂದು ಹೇಳಿದರು. ಮುಖ್ಯ ಅತಿಥಿ ಶ್ರೀ ಶ್ರೀಧರ್ ರಾವ್, ಅಧ್ಯಕ್ಷರು ರೋಟರಿಕ್ಲಬ್ ಮಡಂತ್ಯಾರು ಮಾತನಾಡಿ ವಿದ್ಯೆಯೊಂದಿಗೆ ವಿನಯವಂತರಾಗಿ ಜನರ ಕಷ್ಟಗಳಿಗೆ ಸ್ಪಂದಿಸುವ ಗುಣ ಬೆಳೆಸಿಕೊಳ್ಳಿ ಎಂದು ಹಾರೈಸಿದರು.
ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಸದಸ್ಯರಾದ ಶ್ರೀ ಜಯರಾಮ ಶೆಟ್ಟಿ ಮಾತನಾಡಿ ವಿದ್ಯಾರ್ಥಿಸಂಘಕ್ಕೆ ಶುಭಾಶಯ ಕೋರಿದರು. ಕೆ.ಪಿ.ಎಸ್. ಪುಂಜಾಲಕಟ್ಟೆ ಇಲ್ಲಿನ ಹೈಸ್ಕೂಲ್ ವಿಭಾಗದ ಉಪಪ್ರಾಂಶುಪಾಲರಾದ ಶ್ರೀ ಉದಯಕುಮಾರ್ ಮತ್ತು ಪ್ರಾಥಮಿಕ ವಿಭಾಗದ ಪ್ರಭಾರ ಮುಖ್ಯೋಪಾಧ್ಯಾಯರಾದ ಸುರೇಶ್ ಶೆಟ್ಟಿ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಮಡಂತ್ಯಾರು ಗ್ರಾಮಪಂಚಾಯತ್ ಅಧ್ಯಕ್ಷರಾದ ಶಶಿಪ್ರಭಾ ಅಧ್ಯಕ್ಷತೆ ವಹಿಸಿ ಶುಭ ಕೋರಿದರು.
ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಸದಸ್ಯರಾದ ದಿವಾಕರ್ ಶೆಟ್ಟಿ ಚುನಾಯಿತ ವಿದ್ಯಾರ್ಥಿಗಳಿಗೆ ಗುರುತುಪತ್ರ ವಿತರಿಸಿದರು. ಮಡಂತ್ಯಾರು ಗ್ರಾಮ ಪಂಚಾಯತ್ ಸದಸ್ಯರಾದ ಹನೀಫ್ ಮತ್ತು ಪಾರ್ವತಿ ಉಪಸ್ಥಿತರಿದ್ದರು.
ಪ್ರಾಂಶುಪಾಲರಾದ ಡಾ. ಸರೋಜಿನಿ ಆಚಾರ್ ಪ್ರಾಸ್ತಾವಿಕನುಡಿಗಳೊಂದಿಗೆ ಸ್ವಾಗತಿಸಿ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಭೋಧಿಸಿದರು.ರಸಾಯನಶಾಸ್ತ್ರ ಉಪನ್ಯಾಸಕರಾದ ವಿನುತಾ ಕಾರ್ಯಕ್ರಮ ನಿರೂಪಿಸಿದರು.ಗಣಿತಶಾಸ್ತ್ರ ಉಪನ್ಯಾಸಕರಾದ ಶ್ವೇತ ವಂದನಾರ್ಪಣೆಗೈದರು.ತದನಂತರ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ ನೇರವೇರಿತು.