ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಜರುಗಿತು.
ಸಂಪನ್ಮೂಲ ವ್ಯಕ್ತಿಯಾಗಿ ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯ ಶಿಕ್ಷಕ ಬಿ.ಸೋಮಶೇಖರ ಶೆಟ್ಟಿ ಯವರು ಅನೇಕ ಉದಾಹರಣೆ, ಕಥೆಗಳ ಮೂಲಕ ದುಶ್ಚಟಗಳಿಗೆ ಬಲಿ ಬೀಳದಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಶಿಕ್ಷಣವೆಂದರೆ ಅಂಕ, ಸರ್ಟಿಫಿಕೇಟ್ ಮಾತ್ರವಲ್ಲ.ಅದು ವ್ಯಕ್ತಿಯ ನಡವಳಿಕೆಯಿಂದ ವ್ಯಕ್ತವಾಗಬೇಕು.ಶಿಸ್ತು, ಶಿಕ್ಷಣದ ಅವಿಭಾಜ್ಯ ಅಂಗ.ಮನುಷ್ಯನ ಯಶಸ್ಸು ಆತನ ಆತ್ಮವಿಶ್ವಾಸವನ್ನು ಅವಲಂಬಿಸಿದೆ. ಎಲ್ಲಕ್ಕಿಂತ ಕಠಿಣವಾದದ್ದು ಸ್ವಯಂ ಬದಲಾವಣೆ. ಕ್ಷಣಿಕ ಸುಖಕಾಗಿ ಶಾಶ್ವತ ಸುಖವನ್ನು ನಾಶ ಮಾಡಿಕೊಳ್ಳಬೇಡಿ.ಉತ್ತಮ ಜೀವನ ಕೌಶಲ್ಯ ಹಾಗೂ ಜೀವನ ಮೌಲ್ಯಗಳನ್ನು ರೂಡಿಸಿಕೊಳ್ಳುವಂತೆ ವಿವರಿಸಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ವಿಭಾಗದ ಮುಖ್ಯಸ್ಥೆ ಯಾಗಿರುವ ಶ್ರೀಮತಿ ಮೇರಿಸ್ಮಿತ ವಹಿಸಿದ್ದರು.ಎಲೆಕ್ಟ್ರಾನಿಕ್ & ಕಮ್ಯುನಿಕೇಶನ್ ವಿಭಾಗದ ನಿಖಿತ್ ಡಿ ಆರ್ ನಿರೂಪಿಸಿ ನೆರವೇರಿಸಿದರು.