ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ 2023-24ನೇ ಶೈಕ್ಷಣಿಕ ವರ್ಷದ ಶಾಲಾ ಮಂತ್ರಿಮಂಡಲದ ರಚನೆಯು ಜೂ.24ರಂದು ಚುನಾವಣೆಯ ಮೂಲಕ ರಚಿಸಲಾಯಿತು.
ಮುಖ್ಯಮಂತ್ರಿ ಆಗಿ ಎಂಟನೇ ತರಗತಿಯ ಮಹಮ್ಮದ್ ಸಿನಾನ್ ಹಾಗೂ ಉಪಮುಖ್ಯಮಂತ್ರಿಯಾಗಿ 7ನೇ ತರಗತಿಯ ಶ್ರೀಪ್ರದಾ ಆಯ್ಕೆಯಾದರು.
ವಿರೋಧ ಪಕ್ಷದ ನಾಯಕನಾಗಿ ಏಳನೇ ತರಗತಿಯ ಪ್ರಜ್ವಲ್ ರೆಬೆಲ್ಲೋ ಆಯ್ಕೆಯಾದರು.
ಶಾಲಾ ಮುಖ್ಯ ಶಿಕ್ಷಕರಿಂದ ವಿದ್ಯಾರ್ಥಿಗಳು ಪ್ರಮಾಣ ವಚನ ಸ್ವೀಕರಿಸಿದರು. ಶಿಕ್ಷಕ ಬೃಂದದವರ ಸಹಕಾರದಿಂದ ಚುನಾವಣಾ ಪ್ರಕ್ರಿಯೆಯು ಯಶಸ್ವಿಯಾಗಿ ನೆರವೇರಿತು.
p>