ಬೆಳ್ತಂಗಡಿ ಸ.ಪ್ರ.ದ.ಕಾಲೇಜಿನಲ್ಲಿ ಜಿಎಸ್‌ಟಿ ದಿನಾಚರಣೆ

0

ಬೆಳ್ತಂಗಡಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿ ಇಲ್ಲಿ ಜುಲೈ 1 ಜಿಎಸ್‌ಟಿ ದಿನವನ್ನು ಆಚರಿಸಲಾಯಿತು.

ಭಾರತದಲ್ಲಿ ತೆರಿಗೆ ವ್ಯವಸ್ಥೆಯಲ್ಲಿ ಅದ್ಭುತ ಬದಲಾವಣೆ ತಂದದ್ದು ಜಿಎಸ್​ಟಿ ತೆರಿಗೆ.ಜುಲೈ 1,2017ರಂದು ಭಾರತದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಇವರು ಜಿಎಸ್‌ಟಿಯನ್ನು ಉದ್ಘಾಟಿಸಿದರು.ಅದರ ಸವಿನೆನಪಿಗಾಗಿ ಪ್ರತಿ ವರ್ಷ ಜು.1ರಂದು ಜಿಎಸ್‌ಟಿ ದಿನವನ್ನು ಆಚರಿಸಲಾಗುತ್ತದೆ.ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ವಿಭಾಗ ಹಾಗೂ ಸ್ನಾತ್ತಕೋತ್ತರ ವಿಭಾಗದಿಂದ ಜಿಎಸ್‌ಟಿ ದಿನವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಸ್ನಾತ್ತಕೋತ್ತರ ವಿದ್ಯಾರ್ಥಿಗಳಿಗೆ ಜಿಎಸ್‌ಟಿ ವರವೋ ಶಾಪವೋ ಎಂಬ ವಿಷಯದ ಬಗ್ಗೆ ಚರ್ಚಾ ಸ್ಪರ್ಧೆಯನ್ನು ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ಆಪ್ತ ಸ್ನಾತ್ತಕೋತ್ತರ ವಿಭಾಗದ ಸಂಯೋಜಕರಾದ ಡಾಕ್ಟರ್ ರವಿ ಎಂ ಎನ್ ಇವರು ಪ್ರಸ್ತಾವನೆಗೆದರು.ಪ್ರೊಫೆಸರ್ ಸುರೇಶ್ ವಿ ಹಾಗೂ ಪ್ರೊಫೆಸರ್ ಪದ್ಮನಾಭ ಇವರು ಜಿಎಸ್‌ಟಿ ಮಹತ್ವ ತಿಳಿಸಿದರು.ಕಾಲೇಜಿನ ಪ್ರಾಂಶುಪಾಲರಾದ ಡಾ.ಸುಬ್ರಹ್ಮಣ್ಯ ಕೆ ಇವರು ಅಧ್ಯಕ್ಷತೆ ವಹಿಸಿದರು.ಸ್ನಾತ್ತಕೋತ್ತರ ವಿಭಾಗದ ವಿದ್ಯಾರ್ಥಿಗಳಾದ ಕುಮಾರಿ ಹರಿಣಾಕ್ಷಿ ಕಾರ್ಯಕ್ರಮ ನಿರೂಪಿಸಿದರು.ಕುಮಾರಿ ರಮ್ಯಾ ಸ್ವಾಗತಿಸಿ, ಕುಮಾರಿ ಸುಚಿತ್ರ ವಂದಿಸಿದರು.

LEAVE A REPLY

Please enter your comment!
Please enter your name here