ಬೆಳ್ತಂಗಡಿ ಜೈನ್ ಮಿಲನ್ ನ ಮಾಸಿಕ ಸಭೆ: ಧರ್ಮವನ್ನು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ- ಅಪರ್ಣ ಜೈನ್

0

ಉಜಿರೆ: ಬೆಳ್ತಂಗಡಿ ಜೈನ್ ಮಿಲನ್ ನ ಮಾಸಿಕ ಸಭೆ ಯು ಅಧ್ಯಕ್ಷ ವೀರ್ ನವೀನ್ ಜೈನ್ ಇವರ ಅಧ್ಯಕ್ಷತೆಯಲ್ಲಿ ಜರಗಿತು.

ಮುಖ್ಯ ಅತಿಥಿಯಾಗಿ ವೀರಾಂಗನಾ ಅಪರ್ಣಾ ಜೈನ್ ಭಾಗವಹಿಸಿ ಶಿಖರ್ಜಿ ಯಾತ್ರೆಯ ಅನುಭವವನ್ನೂ ವಿವರಿಸಿ ತಿಳಿಸಿದರು.ಅವರ ತಂಡ ಪ್ರಯಾಣಿಸುತ್ತಿದ್ದ ರೈಲು ಅಪಘಾತಕ್ಕೀಡಾಗಿ ಅದೃಷ್ಟವಶಾತ್ ಇವರು ಬದುಕುಳಿದವರು.108 ಮುಣಿಶ್ರೀ ಮಹಿಮಾ ಸಾಗರ್ ಅವರು ಈ ಯಾತ್ರೆಯನ್ನು ಆಯೋಜಿಸಿದ್ದರು.ಅವರ ತಪಸ್ಸಿನ ಫಲದಿಂದ ಯಾವುದೇ ತೊಂದರೆಯಾಗದೆ ಯಾತ್ರೆಯನ್ನು ಪೂರೈಸಿದ ಬಗ್ಗೆ ಮಾಹಿತಿ ನೀಡಿದರು.ಧರ್ಮವನ್ನು ನಾವು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ವೇದಿಕೆಯ ಮೇಲೆ ಭಾರತೀಯ ಜೈನ್ ಮಿಲನ್ ವಲಯ- 8ರ ನಿರ್ದೇಶಕ ವೀರ್ ಬಿ.ಸೋಮ ಶೇಖರ ಶೆಟ್ಟಿ ಮಾತನಾಡಿ, ಸಂಘಟನೆಯ ಮಹತ್ವ ವಿವರಿಸಿ ಎಲ್ಲರ ಸಹಕಾರ ಬಯಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತೀಯ ಜೈನ್ ಮಿಲನ್ ಬೆಳ್ತಂಗಡಿ ಘಟಕದ ಅಧ್ಯಕ್ಷರಾದ ವೀರ್ ಡಾ.ನವೀನ್ ಕುಮಾರ್ ಜೈನ್ ವಹಿಸಿಕೊಂಡಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ಘಟಕದ ಕಾರ್ಯದರ್ಶಿಯಾದ ಸಂಪತ್ ಕುಮಾರ್ ಜೈನ್ ಇವರು ನಡೆಸಿಕೊಟ್ಟರು.ಮಿಲನ ಎಲ್ಲಾ ಹಿರಿಯ ಮತ್ತು ಕಿರಿಯ ಸದಸ್ಯರುಗಳು ಮುಂದಿನ ಒಂದು ವರ್ಷಗಳ ಕಾಲ ಘಟಕದ ವತಿಯಿಂದ ನಡೆಸಬಹುದಾದ ಕಾರ್ಯಕ್ರಮಗಳ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು.

p>

LEAVE A REPLY

Please enter your comment!
Please enter your name here