ಬೆಳ್ತಂಗಡಿ: ಮೇ ತಿಂಗಳ ಮೂರನೇ ತಾರೀಕಿನ೦ದು ಆರಂಭವಾದ ಮಣಿಪುರ ಗಲಭೆ ಸರಿ ಸುಮಾರು ಎರಡು ತಿಂಗಳುಗಳು ದಾಟಿ ಸುಮಾರು ಮುನ್ನೂರಕ್ಕಿಂತಲೂ ಹೆಚ್ಚು ಚರ್ಚ್ ಗಳು, ಸಾವಿರಾರು ಮನೆಗಳು ನೂರಕ್ಕಿಂತ ಹೆಚ್ಚು ಜೀವಗಳು ಕಳೆದುಕೊಂಡರು. ಇನ್ನು ಎಚ್ಛೆತ್ತುಕೊಳ್ಳದ ಕೇಂದ್ರ ಸರಕಾರದ ನಡೆಯನ್ನು ಕರ್ನಾಟಕ ಸೀರೋ ಮಲಬಾರ್ ಕ್ಯೆಥೋಲಿಕ್ ಅಸೋಸಿಯೇಶನ್ ಇದರ ಉದನೆ ವಲಯದ ಮಹಿಳಾ ಘಟಕ ತೀವ್ರವಾಗಿ ಖಂಡಿಸಿದೆ.
ಬಹು ಚರ್ಚಿತ ಡಬಲ್ ಇಂಜಿನ್ ಸರಕಾರ ಮಣಿಪುರದಲ್ಲಿ ಜನ ಸಾಮಾನ್ಯರ ಜೀವ, ಜೀವನ ಮತ್ತು ಆಸ್ತಿ ಪಾಸ್ತಿ ಸಂರಕ್ಷಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಕೆ.ಎಸ್.ಎಂ.ಸಿ.ಎ ನಿರ್ದೇಶಕರಾದ ವಂದನಿಯ ಶಾಜಿ ಮಾತ್ಯು ಆಕ್ರೋಶ ವ್ಯಕ್ತ ಪಡಿಸಿದರು.
ಮಾನ್ಯ ಪ್ರದಾನ ಮಂತ್ರಿಗಳು ಅಮೇರಿಕನ್ ಕಾಂಗ್ರೆಸ್ ನಲ್ಲಿ ಸಬ್ಕ ಸಾಥ್ ಸಬ್ಕ ವಿಕಾಸ್ ಹೇಳಿಕೆಯನ್ನು ಮಣಿಪುರದ ಜನರಲ್ಲಿ ಹೇಳಬೇಕೆಂದು ಸಂಘದ ಅಧ್ಯಕ್ಷೆ ನಿಷಾ ವಡಾಯಾಟ್ಟ್ ಆಗ್ರಹಿಸಿದರು.ಕ್ರೈಸ್ತ ರ ಮನೆ ಆರಾದನಾಯಗಳೇ ದಾಳಿಗೆ ತುತ್ತಾಗುತ್ತಿದ್ದು ಜನರ ಪ್ರಾಣ ರಕ್ಷಿಸಲು ವಿಫಲವಾಗಿರುವ ಬಿರೆನ್ ಸಿಂಗ್ ನೇತೃತ್ವದ ರಾಜ್ಯ ಸರಕಾರವನ್ನು ವಿಸರ್ಜಿಸಿ ರಾಷ್ಟ್ರಪತಿ ಆಡಳಿತ ಹೆರಬೇಕೆಂದು ದಿನಾಂಕ ಜೂ.29ರಂದು ನೆಲ್ಯಾಡಿಯಲ್ಲಿ ಸೇರಿದ ಸಮಾವೇಶ ಕೇಂದ್ರ ಸರಕಾರವನ್ನು ಅಗ್ರಹಿಸಿದೆ.ಸಭೆಯಲ್ಲಿ ಉದನೆ ಪೋರೋನ ಧರ್ಮ ಗುರುಗಳಾದ ವಂದನಿಯ ಫಾ.ಸಿಬಿ ಪನಚಿಕ್ಕಲ್, ಫಾ. ಜೋಸೆಫ್ ಪೂದಕ್ಕುಯಿ,ಸಂಘ ದ ಅಧ್ಯಕ್ಷೆ ನಿಷಾ, ಜೇಸಿಂತ, ಸಿಸ್ಟೆರ್ ಲಿಸ್ ಮಾತ್ಯು, ಶೈನಿ ಜೆಸ್ಟಿನ್, ಹನಿ ಸಣ್ಣಿ, ಹಾಗೂ ಇತರರು ಉಪಸ್ಥಿತರಿದ್ದರು.