ಗಂಡಿಬಾಗಿಲು: ಸಿಯೋನ್ ಆಶ್ರಮ ಗಂಡಿಬಾಗಿಲು ಇಲ್ಲಿ ಜೂ.21ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಸಂಸ್ಥೆಯ ಮ್ಯಾನೇಜರ್ ಮತ್ತು ಆಡಳಿತಾಧಿಕಾರಿಯ ನೇತೃತ್ವದಲ್ಲಿ ಎಲ್ಲರಿಗೂ ಯೋಗಾಸನ
ಮಾಡಿಸುವುದರ ಮೂಲಕ ಸರಳವಾಗಿ ಆಚರಿಸಲಾಯಿತು.
ಮ್ಯಾನೇಜಿಂಗ್ ಟ್ರಸ್ಟೀಯವರಾದ ಡಾ.ಯು.ಸಿ.ಪೌಲೋಸ್ರವರು ಯೋಗ ದಿನಾಚರಣೆಯ ಮಹತ್ವ ಹಾಗೂ ಪ್ರಾರಂಭವಾದ ಬಗ್ಗೆ ವಿವರಿಸಿದರು.
ಟ್ರಸ್ಟೀ ಕುಟುಂಬಸ್ಥರು, ಸಿಬ್ಬಂದಿವರ್ಗದವರು ಮತ್ತು ಆಶ್ರಮನಿವಾಸಿಗಳು ಭಾಗವಹಿಸಿದರು.
p>