ಬಂಗಾಡಿ: ಜೂನ್ 21ರಂದು ಜಾಗತಿಕವಾಗಿ ಆಚರಿಸಲ್ಪಡುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಮರಿಯಾ೦ಬಿಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇಂದು ಆಚರಿಸಲಾಯಿತು.
ದೈಹಿಕ ಮತ್ತು ವೈಚಾರಿಕ ಶಿಸ್ತು ವ್ಯಕ್ತಿಯನ್ನು ತನ್ನ ಸಮಗ್ರತೆಯಲ್ಲಿ ಬೆಳೆಯಲು ಸಹಕಾರಿಯಾಗುತ್ತದೆ ಎಂದು ಶಾಲೆಯ ಸಂಚಾಲಕರಾದ ವಂದನಿಯ ಫಾಧರ್ ಸೇಬಾಸ್ಟಿನ್.ಸಿ.ಕೆ ತಿಳಿಸಿದರು. ಮುಖ್ಯೋಪಾಧ್ಯಾಯನಿ ವಂದನಿಯ ಸಿಸ್ಟೆರ್ ಶೆರಿನ್ ಮಕ್ಕಳಿಗೆ ಆರೋಗ್ಯ ಪಾಲನೆಯಲ್ಲಿ ಗಮನಿಸಬೇಕಾದ ವಿಚಾರ ಗಳ ಬಗ್ಗೆ ಮಾಹಿತಿ ಒದಗಿಸಿದರು.
ಶಿಕ್ಷಕ ಕೃಷ್ಣಪ್ಪ ಸ್ವಾಗತಿಸಿ, ಗಣೇಶ್ ವಂದನಾರ್ಪಣೆಗೈದರು.ದೈಹಿಕ ಶಿಕ್ಷಕರಾದ ಜೀವನ್ ಕಾರ್ಯಕ್ರಮ ನಿರೂಪಸಿದರು
p>