ನೆಲ್ಯಾಡಿ: ಸೀರೋ ಮಲಬಾರ್ ಮಾತೃ ವೇದಿ ಮಹಿಳಾ ಘಟಕದ 2023-24 ನೇ ಸಾಲಿನ ಪ್ರವೃತ್ತಿ ವರ್ಷ ಕ್ಕೆ ಇಂದಿಲ್ಲಿ ನೆಲ್ಯಾಡಿ ಸಂತ ಅಲ್ಫೋನ್ಸ ತೀರ್ಥ ಕ್ಷೇತ್ರ ದಲ್ಲಿ ಚಾಲನೆ ನೀಡಲಾಯಿತು.ಎಚ್ಚೆತ್ತ ಮಹಿಳೆ ಸಮಾಜದ ಮತ್ತು ಕುಟುಂಬದ ಆಸ್ತಿ ಎಂದು ಅಲ್ಫೋನ್ಸ ಚರ್ಚಿನ ವಂದನಿಯ ಫಾಧರ್ ಶಾಜಿ ಮಾತ್ಯು ತಿಳಿಸಿದರು.
ಮಾನವೀಯ ಮೌಲ್ಯ ಗಳ ಸಾಕಾರವೇ ಪ್ರತಿ ಮಹಿಳೆ ಎಂದು ಸಂಘ ದ ಅಧ್ಯಕ್ಷೆ ಜೆಸಿಂತ ಕೆ ಜೆ ತಿಳಿಸುತ್ತಾ ಈ ಒಂದು ವರ್ಷದಲ್ಲಿ ಹೆಚ್ಚು ಹೆಚ್ಚು ಸಮಾಜ ಮುಖಿ ಕಾರ್ಯಕ್ರಮ ಗಳ ಮುಖಾಂತರ ಸಂಘದ ಸೇವೆ ಪ್ರತಿ ಕುಟುಂಬಕ್ಕೂ ವ್ಯಾಪೀಸಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಸಂತ ಅಲ್ಪೊನ್ಸ ಚರ್ಚಿನ ಟ್ರಸ್ಟಿಗಳಾದ ಈಪನ್ ವರ್ಗಿಸ್, ಟೊಮಿ ಮಟ್ಟಮ್, ಸಂಘ ದ ನಿರ್ದೇಶಕಿ ವಂದನಿಯ ಭಗೀನಿ ಸಿಸ್ಟೆರ್ ಲಿಸ್ ಮಾತ್ಯು, ಲಿನ್ಸಿ ಉಪಾಧ್ಯಕ್ಷರು , ಡೈನ ಶಾಜಿ ಕಾರ್ಯದರ್ಶಿ, ಮೇರಿ ಜೋನ್ ಕಾರ್ಮೆಲ್ ಭವನ್ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.
p>