ಬೆಳಾಲು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ)ಬೆಳ್ತಂಗಡಿ ತಾಲೂಕು ಇದರ ವತಿಯಿಂದ ಉಜಿರೆ ವಲಯದ ಬೆಳಾಲಿನಲ್ಲಿ ಯಂತ್ರಶ್ರೀ ಬಗ್ಗೆ ತರಬೇತಿ ಕಾರ್ಯಕ್ರಮ ನಡೆಯಿತು.
ಭತ್ತದ ಬೀಜದ ಆಯ್ಕೆ, ಬಿಜೋಪಚಾರ, ಸಸಿ ಮಡಿಗೆ ಮಣ್ಣಿನ ಆಯ್ಕೆ, ಸಸಿ ಮಡಿ ತಯಾರಿ, ನಾಟಿ ಗದ್ದೆಯ ತಯಾರಿ, ಯಂತ್ರದ ಮೂಲಕ ಬತ್ತದ ಸಸಿಯ ನಾಟಿ, ಖರ್ಚು ಮತ್ತು ಆದಾಯದ ಬಗ್ಗೆ ಸಂಪೂರ್ಣವಾದ ಮಾಹಿತಿ ನೀಡಲಾಯಿತು.
ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷ ಸೂರಪ್ಪ ಗೌಡ ವಚ್ಚ ವಹಿಸಿದ್ದರು.ಪ್ರಗತಿಪರ ಕೃಷಿಕರಾದ ಸುರೇಶ್ ಮೂರ್ಲೆಗುಂಡಿ ಇವರು ಯಂತ್ರದ ಮೂಲಕ ಬತ್ತನಾಟಿಯ ಅನುಭವವನ್ನು ಹಂಚಿಕೊಂಡರು.ಪ್ರಗತಿಪರ ಕೃಷಿಕರಾದ ಲೋಕಯ್ಯ ಗೌಡ ಉಪಸ್ಥಿತರಿದ್ದರು.ಸೇವಾ-ಪ್ರತಿನಿಧಿಯಾದ ಆಶಾ ರವರು ಸ್ವಾಗತಿಸಿ ವಂದಿಸಿದರು.
p>