ಬೆಳ್ತಂಗಡಿ: 2022 ನೇ ಸಾಲಿನ ಅಂತರಾಷ್ಟ್ರೀಯ ಸಂಸ್ಥೆ ಐಸಾಕ (ISACA) ನಡೆಸಿದ ಸಿಐಎಸ್ಎ (CISA) ಸರ್ಟಿಫೈಡ್ ಇನ್ ಫಾರ್ಮೇಶನ್ ಸಿಸ್ಟಮ್ ಅಡಿಟರ್ ಪರೀಕ್ಷೆಯಲ್ಲಿ ಬೆಳ್ತಂಗಡಿ ಯುವ ಸಾಧಕಿ ಸಾಫ್ಟ್ವೇರ್ ಇಂಜಿನಿಯರ್ ಸಪ್ನರವರು ಅತ್ಯಧಿಕ ಅಂಕಗಳೊಂದಿಗೆ ಉತ್ತೀರ್ಣರಾಗಿ ದೇಶಕ್ಕೆ ಕೀರ್ತಿ ತಂದಿದ್ದಾರೆ.
ಐಟಿ ಕಂಪೆನಿಯಲ್ಲಿ ಸಾಪ್ಟವೇರ್ ಇಂಜಿನಿಯರ್ ಉದ್ಯೋಗದಲ್ಲಿರುವವರು ವಿಶ್ವ ಮಟ್ಟದಲ್ಲಿ ಈ ಪರೀಕ್ಷೆಯನ್ನು ಬರೆಯಬಹುದಾಗಿದ್ದು ಉತ್ತೀರ್ಣರಾಗಬೇಕಾದರೆ ತುಂಬಾ ಪರಿಶ್ರಮದ ಅಗತ್ಯವಿದ್ದು, ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳೆಯಾಗಿ ಗುರುತಿಸಿಕೊಂಡ ಹೆಗ್ಗಳಿಕೆ ಸಪ್ನರವರಿಗೆ ಸಲ್ಲುತ್ತದೆ.ಸಿಐಎಸ್ಎ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಸಪ್ನರವರನ್ನು ಮೇ.10 ರಂದು ಅಮೇರಿಕಾದ ಬೋಸ್ಟನ್ ನಲ್ಲಿ ನಡೆದ ಡಿಜಿಟಲ್ ಟ್ರಸ್ಟ್ ವಲ್ಡ್ ಕಾನ್ಫರೆನ್ಸ್ ನಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.
ಇವರು ಬ್ಯಾಚುಲರ್ ಆಫ್ ಇಂಜಿನಿಯರಿಂಗ್ ಅನ್ನು ಬೆಂಗಳೂರಿನ ಪಿಇಎಸ್ಐಟಿ (PESIT) ನಲ್ಲಿ ಮಾಡಿ, ಪ್ರಸ್ತುತ Capgemini Technology Pvt. Ltd. (ಕ್ಯಾಪ್ಜೆಮಿನೈ)ನಲ್ಲಿ ಗ್ಲೋಬಲ್ ಐಟಿ ಆಡಿಟ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಮೊದಲು CGI, Oracle, Atos ಮೊದಲಾದ ಮಲ್ಟಿನ್ಯಾಷನಲ್ ಕಂಪೆನಿಯಲ್ಲಿ ಕಾರ್ಯನಿರ್ವಹಿಸಿದ್ದರು.
ಇವರು ನಾರಾವಿ ತಿರ್ತೊಟ್ಟು ದಿ| ಬಾಬು ಪೂಜಾರಿರವರ ಮೊಮ್ಮಗ ಪ್ರವೀಣ್ ಪೂಜಾರಿಯವರ ಶ್ರೀಮತಿಯಾಗಿದ್ದಾರೆ.ಹೆಬ್ರಿಯ ಲೀಲಾವತಿ ಮತ್ತು ಭೋಜ ಪೂಜಾರಿ ದಂಪತಿ ಸುಪುತ್ರಿ.ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.