ಹೊಸಂಗಡಿ: ಬ್ರಹ್ಮಶ್ರೀ ಮುಗೇರ ದೈವಸ್ಥಾನ ದಂಡ್ಯೋಟ್ಟು, ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಮಿತಿ, ಜೀರ್ಣೋದ್ದಾರ ಸಮಿತಿ ಹಾಗೂ ನೇಮೋತ್ಸವ ಸಮಿತಿ, ಬ್ರಹ್ಮಶ್ರೀ ಮುಗೇರ ದೈವಸ್ಥಾನ ಚಾರಿಟೇಬಲ್ ಟ್ರಸ್ಟ್ ದಂಡ್ಯೋಟ್ಟು ವತಿಯಿಂದ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ದೈವಗಳ ನೇಮೋತ್ಸವ ಮೇ.20 ರಿಂದ 23 ರ ವರೆಗೆ ನಡೆಯಿತು.
ಮೇ.20 ರಂದು ಪಡ್ಯಾರಬೆಟ್ಟ ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಬಳಿಯಿಂದ ಪಡ್ಯಾರಬೆಟ್ಟ ದೈವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಜೀವಂದರ ಕುಮಾರ್ ಜೈನ್ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು. ಬಳಿಕ ಭವ್ಯ ಮೆರವಣಿಗೆ ಮೂಲಕ ಭಕ್ತರು ಹೊರೆಕಾಣಿಕೆ ಸಮರ್ಪಪಿಸಿದರು.
ಮೇ 21 ರಂದು ಶ್ರೀ ಕ್ಷೇತ್ರ ಪೂಂಜಾ ದೇವಸ್ಥಾನದ ಕೃಷ್ಣ ಪ್ರಸಾದ್ ಅಸ್ರಣ್ಣರ ನೇತೃತ್ವದಲ್ಲಿ ದೇವತಾ ಪ್ರಾರ್ಥನೆ ನಡೆಯಿತು. ಬೆಳಿಗ್ಗೆ ಗಣಹೋಮ,108 ಕಲಶ ಪ್ರತಿಷ್ಠೆ, ಕ್ಷೇತ್ರಕ್ಕೆ ದೈವಗಳ ಭಂಡಾರ ಆಗಮನ,ನಂತರ ದೈವಗಳಿಗೆ ಬ್ರಹ್ಮಕಲಶಾಭಿಶೇಕ ಮಹಾಪೂಜೆ ಜರಗಿತು, ಸಂಜೆ ವಿವಿಧ ಸಾಂಸ್ಕೃಕ ಕಾರ್ಯಕ್ರಮ ಹಾಗೂ ಮನೀಶ್ ಮತ್ತು ತಂಡದಿಂದ ಕಾಮಿಡಿ ಶೋ ನಡೆಯಿತು. ರಾತ್ರಿ ಕಟೀಲು ಲಕ್ಷ್ಮಿನಾರಾಯಣ ಕಟೀಲು ಆಸ್ರಣ್ಣರು ಧಾರ್ಮಿಕ ಸಭಾ ಕಾರ್ಯಕ್ರಮದ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಅಧ್ಯಕ್ಷತೆಯನ್ನು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸುಧಾಕರ ಪಿ. ನೂಯಿ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಮೂಡಬಿದ್ರೆಯ ಉದ್ಯಮಿ ಧನಲಕ್ಷ್ಮೀ ಸಮೂಹ ಸಂಸ್ಥೆಯ ಶ್ರೀಪತಿ ಭಟ್, ಹೊಸಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಕರುಣಾಕರ ಪೂಜಾರಿ, ಡಾ. ಕೆ. ಆರ್. ಪ್ರಸಾದ್ ಬಡಕೋಡಿ ಗುತ್ತು, ಬಾಲಕೃಷ್ಣ ಭಟ್ ಡದ್ದು ಕರಿಮಣೆಲು, ಹೇಮಂತ್ ಭಟ್ ಅರ್ಜಲು, ವೀರೇಂದ್ರ ಕುಮಾರ್ ಬೂಡುಂಗಳ ಬೆಟ್ಟು ಗುತ್ತು ಮಹಾಬಲ ಪೂಜಾರಿ ಅಧ್ಯಕ್ಷರು, ಜೀರ್ಣೋದ್ದಾರ ಸಮಿತಿ, ಲಿಂಗಪ್ಪ ಪೂಜಾರಿ ಪಾದೆ ಬಡಕೋಡಿ, ಕೃಷಿಕ ಪದ್ಮ ಪೂಜಾರಿ ನೂಯಿ, ಗ್ರಾಮ ಪಂಚಾಯತ್ ಸದಸ್ಯರಾದ ಹರಿಪ್ರಸಾದ್ ಪಿ., ಲೋಕೇಶ್, ಪ್ರಮೀಳಾ ಭಾಗವಹಿಸಿದ್ದರು. ಶ್ರೀಪತಿ ಉಪಾಧ್ಯಯ ಸ್ವಾಗತಿಸಿ, ಸಂತೋಷ್ ಸಿದ್ದಕಟ್ಟೆ ನಿರೂಪಿಸಿ ವಂದಿಸಿದರು.
ಇದೇ ಸಂದರ್ಭದಲ್ಲಿ ದಂಡ್ಯೋಟ್ಟು “ಮಣ್ಣುದ ಮಾಯೊಲು ಬ್ರಹ್ಮ ಮುಗೇರ ದೈವೊಲು” ಎಂದ ಧ್ವನಿ ಸುರುಳಿ ಬಿಡುಗಡೆಗೊಳಿಸಲಾಯಿತು.
ಧಾರ್ಮಿಕ ಸಭೆಯ ಬಳಿಕ ಧರ್ಮರಸು ನೆಲ್ಲರಾಯ, ದೈವದ ನೇಮೋತ್ಸವ ನಡೆಯಿತು.ಮೇ 22ರಂದು ವಿವಿಧ ವೈದಿಕ ಕಾರ್ಯಕ್ರಮಗಳು ನಡೆದು ಸಂಜೆ ಮಂಗಳೂರು ಕಿಶೋರ್ ಡಿ. ಶೆಟ್ಟಿ ನಿರ್ದೇಶನದ “ಗರುಡ ಪಂಚಮಿ” ನಾಟಕ ಪ್ರದರ್ಶನಗೊಂಡಿತು. ಬಳಿಕ ಬ್ರಹ್ಮಶ್ರೀ ಮುಗೇರ ಹಾಗೂ ತನ್ನಿ ಮಾನಿಗ ದೈವಗಳ ನೇಮೋತ್ಸವ ಜರಗಿತು.
ಕಾರ್ಯಕ್ರಮದ ಯಶಸ್ವಿಗೆ ಬ್ರಹ್ಮಕಲಶೋತ್ಸವ ಸಮಿತಿ, ಜೀರ್ಣೋದ್ದಾರ ಸಮಿತಿ, ಬ್ರಹ್ಮಶ್ರೀ ಮುಗೇರ ಸಮಿತಿ, ಬ್ರಹ್ಮಶ್ರೀ ಮುಗೇರ ಮಹಿಳಾ ಸಮಿತಿ, ಬ್ರಹ್ಮಶ್ರೀ ಮುಗೇರ ದೈವಸ್ಥಾನದ ಚಾರಿಟೆಬಲ್ ಟ್ರಸ್ಟ್ ನ ಪದಾಧಿಕಾರಿಗಳು, ಸದಸ್ಯರು, ಊರವರು ಉಪಸ್ಥಿತರಿದ್ದು ಸಹಕರಿಸಿದರು.