ಸಿದ್ಧಕಟ್ಟೆ: ರೋಟರಿ ಜಿಲ್ಲೆ 3181 ರ ರೋಟರಿ ಕ್ಲಬ್ ಸಿದ್ಧಕಟ್ಟೆ ಫಲ್ಗುಣಿಯ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ನಡೆಯಿತು.ಸಿದ್ಧಕಟ್ಟೆಯ ಕೆಳಗಿನ ಪೇಟೆಯಲ್ಲಿ ಅತೀ ಅಗತ್ಯವಾಗಿದ್ದ ಪ್ರಯಾಣಿಕರ ತಂಗುದಾಣ ಈ ಸಂದರ್ಭದಲ್ಲಿ ಲೋಕಾರ್ಪಣೆಗೊಂಡಿತು.ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಹೊಕ್ಕಾಡಿಗೋಳಿಯಲ್ಲಿ ಸೆಲ್ಕೋ ಸೋಲಾರ್ ಸಂಸ್ಥೆಯ ಸಹಕಾರದಲ್ಲಿ ಸ್ಥಾಪನೆಗೊಂಡ ಸೋಲಾರ್ ಸ್ಮಾರ್ಟ್ ಕ್ಲಾಸ್ ಅನ್ನು ಉದ್ಘಾಟಿಸಲಾಯಿತು.ಗುಂಡೂರಿಯ ಗುರು ಚೈತನ್ಯ ಸೇವಾಶ್ರಮಕ್ಕೆ ದಿನ ಬಳಕೆಯ ವಸ್ತುಗಳನ್ನು ಹಸ್ತಾಂತರಿಸಿ ಸಿಹಿ ಊಟ ನೀಡಲಾಯಿತು. ಹೊಸಂಗಡಿ ಗ್ರಾಮ ಪಂಚಾಯತಿಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಹಸ್ತಾಂತರಿಸಲಾಯಿತು. ಸೆಲ್ಯೂಟ್ ಟು ದ ಸೈಲೆಂಟ್ ವರ್ಕರ್ ಎಂಬ ವಿಶೇಷ ಪರಿಕಲ್ಪನೆಯಡಿ ಪಕ್ಷಿಪ್ರೇಮಿ ಹಾಗೂ ಪಕ್ಷಿ ಸಂರಕ್ಷಕರಾದ ರಮ್ಯಾ ನಿತ್ಯಾನಂದ ದಂಪತಿಗಳನ್ನು ಸನ್ಮಾನಿಸಲಾಯಿತು. ಫಲಾನುಭವಿಗಳಿಗೆ ವೈದ್ಯಕೀಯ ಚಿಕಿತ್ಸೆಗೆ ನೆರವು ಹಾಗೂ ಶೌಚಾಲಯ ನಿರ್ಮಾಣಕ್ಕೆ ಧನ ಸಹಾಯ ನೀಡಲಾಯಿತು. ಮಹಿಳಾ ಸಬಲೀಕರಣಕ್ಕಾಗಿ ರೋಟರಿ ಸಿದ್ಧಕಟ್ಟೆ ಉಚಿತವಾಗಿ ನಡೆಸುತ್ತಿರುವ ಟೈಲರಿಂಗ್ ತರಬೇತಿಯ ಕೇಂದ್ರಕ್ಕೆ ಟೈಲರಿಂಗ್ ಮೆಷಿನ್ ಹಸ್ತಾಂತರಿಸಲಾಯಿತು. ಸಿದ್ಧಕಟ್ಟೆಯ ಚರ್ಚ್ ಅಂಗನವಾಡಿ ಹಾಗೂ ಎಲ್ಪೇಲ್ ಅಂಗನವಾಡಿಗೆ ಬೇಬಿ ಚಯರ್ ಹಾಗೂ ಟೇಬಲನ್ನು ಕೊಡುಗೆಯಾಗಿ ನೀಡಲಾಯಿತು. ರೊಟೇರಿಯನ್ ಸಚ್ಚಿದಾನಂದ ಭಟ್ ಇವರ ವೈಭವ್ ಮೆಡಿಕಲ್ ಇದರ 25ನೇ ವರ್ಷದ ಸವಿನೆನಪಿಗಾಗಿ ಸ್ಥಳೀಯ ಸಾರ್ವಜನಿಕ ಸಂಸ್ಥೆಗಳು ಹಾಗೂ ವಿವಿಧ ಸಂಘ ಸಂಸ್ಥೆಗಳಿಗೆ ಕೊಡಮಾಡಲಾದ ಪ್ರಥಮ ಚಿಕಿತ್ಸೆ ಪೆಟ್ಟಿಗೆಯನ್ನು ಗ್ರಾಮ ಪಂಚಾಯತಿ ಸಂಗಬೆಟ್ಟು, ಕಸ ವಿಲೇವಾರಿ ವಾಹನ ಸಂಗಬೆಟ್ಟು ಹಾಗೂ ಮೆಸ್ಕಾಂ ಇಲಾಖೆಗೆ ಹಸ್ತಾಂತರಿಸಲಾಯಿತು. ರೋಟರಿ ಕ್ಲಬ್ ಸಿದ್ದಕಟ್ಟೆ ಫಲ್ಗುಣಿ ವತಿಯಿಂದ ಈಗಾಗಲೇ 125 ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳನ್ನು ಹಸ್ತಾಂತರಿಸಲಾಗಿರುವುದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು.
ರೋಟರಿ ಜಿಲ್ಲಾ ಗವರ್ನರ್ ಮೇಜರ್ ಡೋನರ್ ಪ್ರಕಾಶ್ ಕಾರಂತ್, ಅಸಿಸ್ಟೆಂಟ್ ಗವರ್ನರ್ ಎಲಿಯಾಸ್ ಸ್ಯಾಂಟಿಸ್, ಝೋನಲ್ ಲೆಫ್ಟಿನೆಂಟ್ ರಾಘವೇಂದ್ರ ಭಟ್, ಕ್ಲಬ್ ಅಡ್ವೈಸರ್ ಜೆರಾಲ್ಡ್ ಡಿಕೋಸ್ತ, ರೋಟರಿ ಜಿಲ್ಲಾ ಆಡಳಿತ ವಿಭಾಗದ ಕಾರ್ಯದರ್ಶಿ ನಾರಾಯಣ ಹೆಗಡೆ, ಸೆಲ್ಕೋ ಫೌಂಡೇಶನ್ ಮ್ಯಾನೇಜರ್ ನವೀನ್, ವಿವಿಧ ರೋಟರಿ ಕ್ಲಬ್ ಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು, ವಿಶೇಷ ಆಹ್ವಾನಿತರು, ರೋಟರಿ ಕುಟುಂಬ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಅಪೇಕ್ಷ ಮತ್ತು ಪ್ರಮೀಳಾ ಪ್ರಾರ್ಥಿಸಿದರು.ರೋಟರಿ ಸಿದ್ಧಕಟ್ಟೆಯ ಅಧ್ಯಕ್ಷ ಗಣೇಶ್ ಶೆಟ್ಟಿ ಸ್ವಾಗತಿಸಿ, ಕಾರ್ಯದರ್ಶಿ ರಾಜೇಶ್ ನೆಲ್ಯಾಡಿ ವಂದಿಸಿದರು.ರೊ. ದಿನೇಶ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.