ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಕಾಲೇಜ್ ಮಡಂತ್ಯಾರ್ ಇಲ್ಲಿನ ಮಾನವೀಯ ಸಂಘದ ವತಿಯಿಂದ ಪ್ರೊ.ಅರುಣ್ ಜೋನ್ಸನ್ ಬ್ರಾಂಕೋ ನೇತೃತ್ವದಲ್ಲಿ 54 ವಿದ್ಯಾರ್ಥಿಗಳೊಂದಿಗೆ ಏಕದಿನ ಶೈಕ್ಷಣಿಕ ಕ್ಷೇತ್ರ ಭೇಟಿ (Field visit) ಮೇ 19 ರಂದು ಕೈಗೊಳ್ಳಲಾಗಿತ್ತು.
ಪ್ರವಾಸಕ್ಕೆ ಬೆಳಿಗ್ಗೆ 9.30 ಗಂಟೆಗೆ ಸರಿಯಾಗಿ ಹೊರಟು ಸಂಜೆ 4.30 ಗಂಟೆಗೆ ಹಿಂದಿರುಗಲಾಯಿತು. ಆರಂಭದಲ್ಲಿ ಎನ್.ಸಿ.ರೋಡ್ ಸಮೀಪದ ಕೆಡ್ಡಳಿಕೆಯಲ್ಲಿ ಶ್ರೀ ಗಣೇಶ್ ಎಂಬವರು ಅಭಿವೃದ್ಧಿ ಪಡಿಸಿರುವ ಇಸ್ರೇಲ್ ಮಾದರಿಯ ಕೃಷಿ ಚಟುವಟಿಕೆಗಳ ಕಾರ್ಯವೈಖರಿ ಬಗ್ಗೆ ತಿಳಿಯಲು ತೆರಳಲಾಯಿತು. ಶ್ರೀಯುತರು ವಿದ್ಯಾರ್ಥಿಗಳಿಗೆ ತನ್ನ ಇಸ್ರೇಲ್ ಮಾದರಿಯ ಕೃಷಿ ವ್ಯವಸ್ಥೆಯನ್ನು ವಿವರಿಸಿದರು.
ಅಲ್ಲಿಂದ ಹೊರಟು ಸಮೀಪದ ‘ರಬ್ಬರ್ ಲಾಟೆಕ್ಸ್ ಗ್ರೂಪ್ ಪ್ರೊಸೆಸ್ಸಿಂಗ್ ಸೆಂಟರ್’ ಗೆ ಭೇಟಿ ನೀಡಿ, ರಬ್ಬರ್ ಉತ್ಪಾದನಾ ವ್ಯವಸ್ಥೆಯ ಕುರಿತಾಗಿ ಮಾಲೀಕರಾದ ಶ್ರೀ ಅನೂಪ್ ಮತ್ತು ಶ್ರೀ ಗಣೇಶ್ ತಿಳಿಸಿಕೊಟ್ಟರು.
ತದನಂತರ ಕರಾವಳಿ ಕರ್ನಾಟಕದ ಅತ್ಯಂತ ಪ್ರಸಿದ್ಧ ಕಾರಿಂಜೇಶ್ವರ ದೇವಾಲಯಕ್ಕೆ ಭೇಟಿ ನೀಡಿ, ಅಲ್ಲಿನ ಪ್ರಕೃತಿ ಸೌಂದರ್ಯದ ವೀಕ್ಷಣೆ ಮಾಡಲಾಯಿತು. ಮಧ್ಯಾಹ್ನದ ಭೋಜನದ ನಂತರ ಅಲ್ಲಿಪಾದೆಯ ಸಂತ ಜೋನರ ಚರ್ಚ್ ಗೆ ಭೇಟಿ ನೀಡಿ, ಅಲ್ಲಿಯೇ ಸಮೀಪದ ರಚನಾ ಪ್ರಶಸ್ತಿ ವಿಜೇತರಾದ ಲಿಯೋ ಡಿ’ಸೋಜಾರವರ ಪಶುಸಂಗೋಪನಾ ಕೇಂದ್ರಕ್ಕೆ ಭೇಟಿ ನೀಡಿ, ಅವರಿಂದ ಮಾಹಿತಿ ಸಂಗ್ರಹಿಸಿ, ಸಂಜೆ ಹಿಂದಿರುಗಲಾಯಿತು.
ಈ ಶೈಕ್ಷಣಿಕ ಕ್ಷೇತ್ರ ಭೇಟಿಯಲ್ಲಿ ಕಚೇರಿ ನಿರ್ವಹಣೆ ಮತ್ತು ಅಭ್ಯಾಸ ವಿಭಾಗದ ಮುಖ್ಯಸ್ಥರಾದ ಪ್ರೊ.ಜೋನ್ ಬಾಪ್ಟಿಸ್ಟ್ ಡಿ’ಸೋಜಾ, ಇತಿಹಾಸ ವಿಭಾಗದ ಸಹಪ್ರಾಧ್ಯಾಪಕ ಪ್ರೊ.ನೋರ್ಬೆರ್ಟ್ ಡಿ’ಸೋಜಾ, ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕಿ ರಕ್ಷಿತಾ, ರಾಜಕೀಯ ಶಾಸ್ತ್ರದ ಉಪನ್ಯಾಸಕರಾದ ಶ್ರೀನಾಥ್, ಹಿಂದಿ ವಿಭಾಗದ ಮುಖ್ಯಸ್ಥೆ ಶ್ರೀಮತಿ ಸೀಮಾ ಉಪಸ್ಥಿತರಿದ್ದರು.