ಕಾಂಗ್ರೆಸ್ ಗ್ಯಾರಂಟಿ ಯೋಜನೆಯನ್ನು ಟೀಕಿಸುವ ನೈತಿಕತೆ ಬಿಜೆಪಿಗಿಲ್ಲ – ಸಂದೀಪ್ ಎಸ್ ನೀರಲ್ಕೆ ಅರ್ವ

0

ಬೆಳ್ತಂಗಡಿ: ಅಳದಂಗಡಿಯಲ್ಲಿ ಬಿಜೆಪಿಯ ಸಮಾವೇಶದಲ್ಲಿ ಕಾಂಗ್ರೆಸ್ಸಿನ ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದ ಕೋಟಾ ಶ್ರೀನಿವಾಸ ಪೂಜಾರಿಯವರ ಹೇಳಿಕೆಗೆ ಕೆಪಿಸಿಸಿ ಸಾಮಾಜಿಕ ಜಾಲತಾಣ ದ.ಕ ಜಿಲ್ಲಾ ಪ್ರದಾನ ಕಾರ್ಯದರ್ಶಿ ಸಂದೀಪ್ ಎಸ್ ನೀರಲ್ಕೆ ಅರ್ವರವರು ವ್ಯಂಗ್ಯವಾಡಿದರು.’ಕರಾವಳಿಯ ಜನತೆಗೆ ಪಡಿತರ ಕುಚ್ಚಲಕ್ಕಿ ಒದಗಿಸಲು ಕೋಟಾರಿಗೆ ಆಗಿಲ್ಲ ವಾಸ್ತವದಲ್ಲಿ ಕೋಟಾರವರ ಭರವಸೆ ಪುಸ್ತಕದ ನವಿಲುಗರಿಯ ಕಥೆಯಂತಾಗಿದೆ.ಕಾಂಗ್ರೆಸ್ ವಿಧಾನಸಭಾ ಚುನಾವಣೆ ಗೆಲ್ಲಲಿದ್ದು ಎಲ್ಲಾ ಗ್ಯಾರಂಟಿಗಳನ್ನು ಈಡೇರಿಸಲಿದೆ,ಕರಾವಳಿ ಜನತೆಯ ಬೇಡಿಕೆಗೆ ಪೂರಕವಾಗಿ ಪಡಿತರ ಕುಚ್ಚಲಕ್ಕಿ ನೀಡಲಿದೆ’ ಎಂದರು.

p>

LEAVE A REPLY

Please enter your comment!
Please enter your name here