ಬೆಳ್ತಂಗಡಿ: ದೇಶದಲ್ಲಿ ಅವ್ಯಾಹತ ವಾಗಿ ನಡೆಯುತ್ತಿರುವ ಮುಗ್ದ, ಅಮಾಯಕ, ದೇಶ ನಿರ್ಮಾಣಕ್ಕೆ ಕಟಿ ಬದ್ಧರಾಗಿರುವ ಕ್ರೈಸ್ತ ಸಮಾಜದ ಮೇಲಿನ ದಾಳಿ ಖಂಡನಿಯವಾಗಿದ್ದು ಕೇಂದ್ರ ಸರಕಾರ ತುರ್ತಾಗಿ ಮಣಿಪುರ ಸರಕಾರ ವನ್ನು ವಜಾಗೊಳಿಸಿ ಬುಡಕಟ್ಟು ಜನರ ಹಕ್ಕನ್ನು ಕಸಿಯದೆ ರಕ್ಷಣೆ ಕೊಡುವ ಸಂವಿದಾನಾತ್ಮಕ ಹೊಣೆಗಾರಿಕೆಯನ್ನು ನಿರ್ವಹಿಸುವಂತೆ ಕೆ.ಎಸ್.ಎಂ.ಸಿ.ಎ ಕೇಂದ್ರ ಸಮಿತಿ ಕೇಂದ್ರ ಸರಕಾರ ವನ್ನು ಒತ್ತಾಯಿಸಿದೆ.ಗಲಭೆಗಳಾದಾಗ ನಿರಂತರವಾಗಿ ಕ್ರೈಸ್ತ ಪೂಜಾ ಮಂದಿರಗಳು ವ್ಯಕ್ತಿ ಗಳು ದಾಳಿಗೆ ತುತ್ತಾಗುತ್ತಿದ್ಧು ರಕ್ಷಣೆಯೇ ಇಲ್ಲದಾಗಿದೆ.ಕ್ರೈಸ್ತ ಪೂಜಾ ಮಂದಿರಗಳ ಮೇಲಿನ ದಾಳಿಯನ್ನು ಸ್ವತಂತ್ರ ಸಂಸ್ಥೆ ಯಿಂದ ತನಿಖೆ ಮಾಡುವಂತೆ ಹಾಗೂ ಈ ರೀತಿಯ ಘಟನೆಗಳು ಮರುಕಳಿಸದಂತೆ ಕ್ರಮ ವಹಿಸುವಂತೆ ಒತ್ತಾಯಿಸುತ್ತಿದೆ.
p>