ಬೆಳ್ತಂಗಡಿ ಕ.ಸಾ.ಪ ವತಿಯಿಂದ ಸಾಹಿತ್ಯ ಪರಿಷತ್ತು ಸ್ಥಾಪನಾ ದಿನಾಚರಣೆ ಮತ್ತು ಮಾಚಾರು ಗೋಪಾಲ ನಾಯ್ಕರ ಸಂಸ್ಮರಣೆ

0

ಬೆಳ್ತಂಗಡಿ: ದ ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕದ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನಾ ದಿನಾಚರಣೆ ಮತ್ತು ಇತ್ತೀಚೆಗೆ ನಿಧನರಾದ ಮಾಚಾರ್ ಗೋಪಾಲ ನಾಯ್ಕರವರ ಸಂಸ್ಮರಣೆ ಕಾರ್ಯಕ್ರಮವು ಬೆಳ್ತಂಗಡಿಯ ವಾಣಿ ಪದವಿ ಪೂರ್ವ ಕಾಲೇಜಿನಲ್ಲಿ ಜರಗಿತು.

ಸಭಾಧ್ಯಕ್ಷತೆ ವಹಿಸಿದ್ದ ಬೆಳ್ತಂಗಡಿ ತಾಲೂಕು ಕ ಸಾ ಪ ಘಟಕದ ಅಧ್ಯಕ್ಷ ಡಿ. ಯದುಪತಿ ಗೌಡ ಮಾತನಾಡುತ್ತಾ, 1915 ಮೇ ಐದರಂದು ಸ್ಥಾಪನೆಗೊಂಡ ಕನ್ನಡ ಸಾಹಿತ್ಯ ಪರಿಷತ್ತು ಸಮಸ್ತ ಕನ್ನಡ ನಾಡ ಜನತೆಯ ಅಸ್ಮಿತೆಯ ಸಂಘಟನೆ. ಈ ಮೂಲಕ ಕನ್ನಡ ಸಾಹಿತ್ಯ , ಭಾಷೆ ಮತ್ತು ಸಂಸ್ಕೃತಿಯನ್ನು ಪ್ರಸಾರ ಮತ್ತು ರಕ್ಷಣಾ ಕಾರ್ಯವನ್ನು ಮಾಡುವ ಸಂಸ್ಥೆಯಾಗಿದೆ. ಈ ಸಂಸ್ಥೆಗೆ ಎಲ್ಲ ಕನ್ನಡಿಗರೂ ಸದಸ್ಯರಾಗಬೇಕು ಎಂದು ಕರೆ ನೀಡಿದರು. ಮಾಚಾರ್ ಗೋಪಾಲ ನಾಯ್ಕರು ಜಾನಪದ ಲೋಕದ ಓರ್ವ ಮಾಹಾನ್ ಶಕ್ತಿ ಮತ್ತು ಶ್ರೇಷ್ಠ ಕಲಾವಿದರು ಎಂದ ಬಣ್ಣಿಸಿ ಗೋಪಾಲ ನಾಯ್ಕರಿಗೆ ನುಡಿನಮನ ಸಲ್ಲಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನಾ ದಿನದ ಬಗ್ಗೆ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ಉಪನ್ಯಾಸಕ ಬಿ. ವಸಂತ ಶೆ‌ಟ್ಟಿ, ವಾಣಿ ಶಾಲೆಯ ಉಪನ್ಯಾಸಕ ಬೆಳಿಯಪ್ಪರವರು ಮಾಚಾರು ಗೋಪಾಲ ನಾಯ್ಕರವರ ಬಗ್ಗೆ ಮಾತನಾಡಿದರು. ಈ ಸಂದರ್ಭದಲ್ಲಿ ವಾಣಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಬೆಳ್ತಂಗಡಿ ತಾಲೂಕು ಕ ಸಾ ಪ ದ ಕಾರ್ಯದರ್ಶಿ ರಾಮಕೃಷ್ಣ ಭಟ್ ಚೊಕ್ಕಾಡಿಯವರು ಸ್ವಾಗತಿಸಿ, ವಾಣಿ ಶಾಲೆಯ ಮುಖ್ಯೋಪಾಧ್ಯಾಯ ಲಕ್ಷ್ಮೀನಾರಾಯಣರವರು ವಂದಿಸಿದರು. ಕಾಲೇಜಿನ ಉಪನ್ಯಾಸಕಿ ಶ್ರೀಮತಿ ಮೀನಾಕ್ಷಿಯವರು ಕಾರ್ಯಕ್ರಮ ನಿರೂಪಿಸಿದರು.

p>

LEAVE A REPLY

Please enter your comment!
Please enter your name here