ಬೆಳ್ತಂಗಡಿ: ಸಿಐಟಿಯು ಬೆಳ್ತಂಗಡಿ ತಾಲೂಕು ಸಮಿತಿ, ಕಾರ್ಮಿಕ ಸಂಘಟನೆಗಳು, ಸಾಮೂಹಿಕ ಸಂಘಟನೆಗಳ ಜಂಟಿ ಆಶ್ರಯದಲ್ಲಿ ಮೇ ದಿನಾಚರಣೆಯು ಮೇ.1 ರಂದು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘದ ರಾಜ್ಯ ಸಹ ಕಾರ್ಯದರ್ಶಿ ಭರತ್ ರಾಜ್ ಮಾತಾನಾಡಿ ಇಂದು ಶ್ರಮಿಕರಿಗೆ ಸಂಭ್ರಮ ದಿನ, ಈ ದಿನವು ಕಾರ್ಮಿಕರ ಹೋರಾಟ ತ್ಯಾಗ ಬಲಿದಾನದ ಪರಂಪರೆಯ ಭಾಗವೇ ಮೇ ದಿನಾಚರಣೆ ಎಂದು ಹೇಳಿದರು. ಸ್ವಾಭಿಮಾನ ಜೀವನ ಮೂಲ ಭೂತ ಸೌಕರ್ಯ ಕಲ್ಪಿಸುವುದುರಿಂದ ದೇಶ ಅಭಿವೃದ್ಧಿ ಹೊಂದಲು ಸಾಧ್ಯ. ಕೇಂದ್ರ ಸರ್ಕಾರವು ಬಜೆಟ್ ನಲ್ಲಿ ಕೃಷಿ, ಗ್ರಾಮೀಣ ಪ್ರದೇಶದಗಳಿಗೆ ಕಡಿಮೆ ಆಧ್ಯತೆ ನೀಡಿದೆ. ಕಾರ್ಮಿಕರ 29 ಕಾನೂನುಗಳನ್ನು ರದ್ದು ಮಾಡಿ ಒಂದೇ ಕಾನೂನನ್ನು ತಂದಿದೆ, ಹೆಣ್ಣು ಮಕ್ಕಳನ್ನು ರಾತ್ರಿಯಲ್ಲಿ ಕೆಲಸ ಮಾಡುವ ಕಾನೂನನ್ನು ತಂದಿದ್ದಾರೆ ಹಾಗೂ ನೌಕರರ ಪಿಂಚಣಿ ವ್ಯವಸ್ಥೆಯನ್ನು ರದ್ದುಗೊಳಿಸುತ್ತಿದ್ದಾರೆ, ಆರ್ಥಿಕ ಶಕ್ತಿಯನ್ನು. ಕಿತ್ತುಕೊಳ್ಳುವ ವ್ಯವಸ್ಥೆ ಜಿ ಎಸ್ ಟಿಯಾಗಿದೆ. ಕೇರಳ ರಾಜ್ಯವು ದೇಶಕ್ಕೆ ಮಾದರಿ ರಾಜ್ಯವಾಗಿದೆ ಇದಕ್ಕೆ ಕಾರಣ ಅಲ್ಲಿಯ ಸರಕಾರದ ಉತ್ತಮ ವ್ಯವಸ್ಥೆಗಳು.ಲಾಭದಾಯಕ ಬ್ಯಾಂಕುಗಳನ್ನು ವಿಲೀನ ಮಾಡಿದ್ದಾರೆ, ಕಾರ್ಮಿಕ ವರ್ಗದ ಮೇಲೆ ಐಕ್ಯತೆ ಇರಬೇಕು ಎಂದು ನುಡಿದರು.
ಡಿವೈಎಫ್ಐ ನ ರಾಜ್ಯ ಅಧ್ಯಕ್ಷ ಮುನಿರ್ ಕಾಟಿಪಳ್ಳ ಮಾತಾನಾಡಿ ದುಡಿಯವರ್ಗಕ್ಕೆ ಜಾತಿ ಮತ ಧರ್ಮದ ಭೇದವಿಲ್ಲ ಚುನಾವಣೆಯ ಸಂದರ್ಭದಲ್ಲಿ ಜಾತಿ ಧರ್ಮ ಎಂಬುದು ರಾರಾಜಿಸುತ್ತಿದೆ. ನಾವು ಕಾರ್ಮಿಕರ ಹೋರಾಟ ತ್ಯಾಗ ಬಲಿದಾನದ ಚರಿತ್ರೆಯನ್ನು ಮರುಕಳಿಸಬೇಕು, 8ಗಂಟೆಯ ಅವದಿ ದುಡಿಯುವ ಹಕ್ಕುನ್ನು 12ಗಂಟೆಗೆ ವಿಸ್ತಾರಿಸಿದೆ , ಕಾರ್ಮಿಕರ ದುಡಿದು ದೇಶದ ಸಂಪತ್ತನ್ನು ನಿರ್ಮಿಸಿದ್ದಾರೆ.
ಕಾರ್ಮಿಕರ ಬದುಕಿಗೆ ಕೆಂಪು ಬಾವುಟವೇ ಹೀರೋ ಎಂದು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೀಡಿ ಕಾರ್ಮಿಕರ ಸಂಘದ ಅಧ್ಯಕ್ಷ ಬಿ.ಎಂ.ಭಟ್ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಜನವಾದಿ ಮಹಿಳಾ ಸಂಘಟನೆ ತಾಲೂಕು ಅಧ್ಯಕ್ಷ ಕಿರಣ್ ಪ್ರಭು, ಕಾರ್ಯದರ್ಶಿ ಕುಮಾರಿ, ಬೀಡಿ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಈಶ್ವರಿ ಶಂಕರ್ ಪದ್ಮುಂಜ, ಕಾರ್ಮಿಕ. ಮುಖಂಡೆ ನೆಬಿಸ ಪ್ರಾಂತ ರೈತ ಸಂಘದ ಅಧ್ಯಕ್ಷ ಲಕ್ಷ್ಮಣಗೌಡ, ಶ್ಯಾಂರಾಜ್ ಪಟ್ರಮೆ,ಕಟ್ಟಡ ಕಾರ್ಮಿಕ ಸಂಘದ ಕಾರ್ಯದರ್ಶಿ ಯುವರಾಜ್, ಡಿವೈಎಫ್ಐ ಕೋಶಾಧಿಕಾರಿ ಅಶ್ವಿತ, ಕಟ್ಟಡ ಕಾರ್ಮಿಕ ಸಂಘದ ಕೋಶಾಧಿಕಾರಿ ಭವ್ಯ, ಕಾರ್ಮಿಕ ಹಿರಿಯ ಮುಖಂಡ ಜಯರಾಮ, ಕಾರ್ಮಿಕ ಮುಖಂಡರುಗಳಾದ ಜಯಶ್ರೀ, ಪುಷ್ಪಾ ಮತ್ತು ಸುಜಾತ ಉಪಸ್ಥಿತರಿದ್ದರು.