ಚಾರ್ಮಾಡಿ:ಚಾರ್ಮಾಡಿಯಲ್ಲಿ ಅಲ್ಯುಮಿನಿಯಂ ದೋಟಿ ಕೊಂಡೊಯ್ಯುತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ಲೈನ್ಗೆ ತಗುಲಿ ಮೂವರು ಮಕ್ಕಳು ಗಾಯಗೊಂಡ ಘಟನೆ ನಡೆದಿದೆ.
ಇಮ್ಮಿಯಾಜ್ ಅವರ ಮಕ್ಕಳಾದ ಮಹಮ್ಮದ್ ಆಲಿ (16), ಮಹಮ್ಮದ್ ಇನಾಜ್ (8) ಹಾಗೂ ಹನೀಫ್ ಅವರ ಪುತ್ರ ಅಯ್ಯಾನ್ (6) ವಿದ್ಯುತ್ ಆಘಾತಕ್ಕೊಳಗಾದವರು.
ಇವರನ್ನು ಸ್ಥಳೀಯರು ಕೂಡಲೇ ಕಕ್ಕಿಂಜೆ ಹಾಗೂ ಉಜಿರೆಯ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದು ಪ್ರಾಥಮಿಕ ಚಿಕಿತ್ಸೆ ಒದಗಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಕ್ಕಳು ಸುಟ್ಟ ಗಾಯಗಳಿಗೆ ಒಳಗಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಎಂದು ತಿಳಿದು ಬಂದಿದೆ.
p>