ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆಯಲ್ಲಿ ಕ್ಷೇತ್ರ ಅಧ್ಯಯನ ಕಾರ್ಯಕ್ರಮದ ಅಡಿಯಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಅರ್ಥಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ರುಡ್ ಸೆಟ್ ಸಂಸ್ಥೆಗೆ ಭೇಟಿ ನೀಡಿ ಸಮೀಕ್ಷೆ ನಡೆಸಿ ಮಾಹಿತಿ ಪಡೆದುಕೊಂಡರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆಯಲ್ಲಿ ಕ್ಷೇತ್ರ ಅಧ್ಯಯನ ಕಾರ್ಯಕ್ರಮದ ಅಡಿಯಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಅರ್ಥಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ರುಡ್ ಸೆಟ್ ಸಂಸ್ಥೆಗೆ ಭೇಟಿ ನೀಡಿ, ಗ್ರಾಮೀಣ ವಿದ್ಯಾರ್ಥಿಗಳಿಗೆ ಸ್ವಯಂ ಉದ್ಯೋಗವಕಾಶ ಕಲ್ಪಿಸಲು ಇರುವ ವಿವಿಧ ತರಬೇತಿಗಳ ಮಹತ್ವ ತಿಳಿದುಕೊಂಡರು ಹಾಗು ತರಬೇತಿ ಅವಧಿಯಲ್ಲಿ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.
ಈ ಕಾರ್ಯಕ್ರಮಲ್ಲಿ ರುಡ್ ಸೆಟ್ ಸಂಸ್ಥೆ ಸಂಸ್ಥೆಯ ಉಪನ್ಯಾಸಕರು ಮತ್ತು ತರಬೇತಿದಾರರು ಆಗಿರುವ ಶ್ರೀಮತಿ ಅನಸೂಯಾ ರವರು ತರಬೇತಿಯ ವಿಧಾನ ಮತ್ತು ಗ್ರಾಮೀಣ ಅಭಿರ್ವದ್ದಿಯಲ್ಲಿ ತರಬೇತಿಯ ಮಹತ್ವ ವನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು ರುಡ್ ಸೆಟ್ ಸಂಸ್ಥೆ ಸಂಸ್ಥೆಯ ತರಬೇತಿಗಳ ಬಗ್ಗೆ ಯುವ ಜನರಲ್ಲಿ ಜಾಗ್ರತಿ ಮೂಡಿಸುವ ಕಾರ್ಯಕ್ರಮ ವಿದ್ಯಾರ್ಥಿಗಳು ಹಮ್ಮಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಡಾ. B.A ಕುಮಾರ ಹೆಗ್ಡೆಯವರ ಮಾರ್ಗದರ್ಶನದಲ್ಲಿ ಡಾ.ನಾಗರಾಜ ಪೂಜಾರಿ ಯಶಸ್ವಿಯಾಗಿ ಕ್ಷೇತ್ರ ಅಧ್ಯಯನ ಕಾರ್ಯಕ್ರಮ ಸಂಘಟಿಸಿ, ನಿರ್ವಹಣೆ ಮಾಡಿದರು.ವಿಭಾಗ ವರಿಷ್ಠ ಡಾ.ಗಣರಾಜ್ ಕೆ ಎಲ್ಲ ರೀತಿಯ ಸಹಕಾರ ನೀಡಿದರು.
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಸುಮಂತ್, ವರುಣ್, ಪ್ರಜ್ವಲ್ ಧನ್ಯಶ್ರೀ ಗಾಯತ್ರಿ, ಅಂಕಿತ, ಧನ್ಯ ಕೌಶಿಕ ಮತ್ತು ಪ್ರಣಾಮ್ ಭಾಗವಹಿಸಿದ್ದರು.