ಲಾಯಿಲ: ಜೋಯಾಲುಕ್ಕಾಸ್ ಫೌಂಡೇಶನ್ ಟ್ರಸ್ಟ್ ವತಿಯಿಂದ 7.5 ಲಕ್ಷ ವೆಚ್ಚದ ಮನೆ ಹಸ್ತಾಂತರ

0

ಜೋಯಾಲುಕ್ಕಾಸ್ ಫೌಂಡೇಶನ್ ಟ್ರಸ್ಟ್ ವತಿಯಿಂದ ಲಾಯಿಲ ವೀಣಾ ಜನಾರ್ದನ ಪ್ರಭು ಅವರಿಗೆ ಸುಮಾರು 7.5 ಲಕ್ಷ ವೆಚ್ಚದಲ್ಲಿ ಸುಂದರವಾದ ಮನೆ ಹಸ್ತಾಂತರ ಕಾರ್ಯಕ್ರಮ ಎ.11 ರಂದು ನಡೆಯಿತು.

ತಾಲೂಕು ಪಂಚಾಯತ್ ಸಿ.ಇ.ಒ ಕುಸುಮಾಧರ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಬಳಿಕ ಜೋಯಲುಕ್ಕಾಸ್ ಫೌಂಡೇಶನ್ ಟ್ರಸ್ಟ್ ನಿಂದ ಮನೆಯ ಕೀ ಹಸ್ತಾಂತರ ಕಾರ್ಯಕ್ರಮ ನಡೆಯಿತು.

ಕಡು ಬಡತನದಿಂದ ಕುಟುಂಬಕ್ಕೆ ಈ ಪ್ರತಿಷ್ಠಿತ ಸಂಸ್ಥೆ ಅಧಾರವಾಗಿದೆ, ಇನ್ನೂ ಲಾಯಿಲ ಗ್ರಾಮ ಪಂಚಾಯತ್ ನಿಂದ ವಿದ್ಯುತ್ ಹಾಗೂ ನೀರಿನ‌ ವ್ಯವಸ್ಥೆಯನ್ನು ಮಾಡಲಾಯಿತು.

ಈ ಸಂದರ್ಭದಲ್ಲಿ ಲಾಯಿಲ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ, ತಾಲೂಕು ಪಂಚಾಯತ್ ಸಿ.ಓ ಕುಸುಮಾಧರ್, ಜೋಯಾಲುಕ್ಕಾಸ್ ರೀಜನಲ್ ಮ್ಯಾನೇಜರ್ ಜಿನೇಶ್, ಬ್ರಾಂಚ್ ಮ್ಯಾನೇಜರ್ ಹರೀಶ್.ಪಿ.ಎಸ್, ಮಾರ್ಕೆಟಿಂಗ್‌ ಮಧು, ಮಾದರಿ ಗ್ರಾಮ ವಿಕಾಸ ಪ್ರೇರಕಿ ಯಶೋಧ, ಲಾಯಿಲ ಗ್ರಾಮ ಪಂಚಾಯತ್ ಅಧ್ಯಕ್ಷೆ ಆಶಾ ಬೆನೆಡಿಕ್ಟ್ ಸಲ್ದಾನ., ಉಪಾಧ್ಯಕ್ಷ ಗಣೇಶ್‌, ಸದಸ್ಯರಾದ ಅರವಿಂದ, ಸುಗಂಧಿ ಹಾಗೂ ಲಾಯಿಲ ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here