ಬೆಳ್ತಂಗಡಿ : ಬೆಳ್ತಂಗಡಿ ಶ್ರೀ ಧರ್ಮಸ್ಥಳ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಾಲ್ಕು ದಿನಗಳ ಬೇಸಿಗೆ ಶಿಬಿರವು ನಡೆಯಿತು. ಬೇಸಿಗೆ ಶಿಬಿರದ ಉದ್ಘಾಟಕರಾಗಿ ಮಕ್ಕಳ ಹಕ್ಕುಗಳ ಸಮನ್ವಯ ಅಧಿಕಾರಿಯಾದ ವಿನೋದ್ ಕಲ್ಲಾಜೆ ಆಗಮಿಸಿದ್ದರು. ಮುಖ್ಯ ಅಭ್ಯಂಗತರಾಗಿ ಶ್ರೀ ಧರ್ಮಸ್ಥಳ ಶಿಕ್ಷಣ ಸಂಸ್ಥೆಯ ಕಲಾ ಶಿಕ್ಷಕ ಸುಂದರ್ ನಾಯ್ಕ್ , ಶ್ರೀಮತಿ ಪೈ ಹಾಗೂ ರಜನಿ ಕಾಮತ್, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಹೇಮಲತಾ ಎಂ ಆರ್ ವೇದಿಕೆ ಯಲ್ಲಿ ಉಪಸ್ಥಿತರಿದ್ದರು..
ವಿದ್ಯಾರ್ಥಿಗಳಿಗೆ ಅಜ್ಜಿ ಕಥೆ, ಬಾಲಗೀತೆ, ಕ್ರಾಫ್ಟ್ ವರ್ಕ್ ಗಳು ಬೆಂಕಿ ರಹಿತ ಆಹಾರ ಪದಾರ್ಥಗಳು, ಮೆಹಂದಿ, ಹೇರ್ ಸ್ಟೈಲ್, ಫೇಶಿಯಲ್, ಎಂಬ್ರಾಯಿಡರ್ ವಕ್೯, ಕಸೂತಿ, ವಿದ್ಯುತ್ ಉಪಕರಣಗಳ ಬಳಕೆ ಮತ್ತು ಜಾಗ್ರತಿ, ನಾಯಕತ್ವದ ಬಗ್ಗೆ ಅರಿವು, ಇತ್ಯಾದಿಗಳ ಬಗ್ಗೆ ತರಬೇತಿ ನೀಡಲಾಯಿತು.
ಸಮಾರೋಪ ಸಮಾರಂಭದಲ್ಲಿ ಸ್ಮೀತೇಶ್ ಬಾರ್ಯ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಬೇಸಿಗೆ ಶಿಬಿರದಲ್ಲಿ ನಡೆದಂತಹ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಕ್ಕಳ ಮುಂದಿನ ಜೀವನ ಶೈಲಿಯಲ್ಲಿ ಏಕಾಗ್ರತೆ ,ಶಿಸ್ತು, ತಾಳ್ಮೆ ಆಲಿಸುವಿಕೆ ಯಾವ ರೀತಿ ಬೆಳೆಸಬೇಕು ಗುರು ಹಿರಿಯರನ್ನು ಹೇಗೆ ಸ್ಮರಿಸಬೇಕು ಎಂಬುದನ್ನು ಮಕ್ಕಳಿಗೆ ತಿಳಿಸಿದರು.
ಸಮಾರೋಪದ ಉಪಸ್ಥಿತಿಯಲ್ಲಿ ಸಹನ ಜೈನ್ ಹರ್ಬಲ್ ಬ್ಯೂಟಿಷಿಯನ್, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಹೇಮಲತಾ ಎಂ ಆರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿ ಕುಮಾರಿ ಅನುಶ್ರೀ ಕಾರ್ಯಕ್ರಮವನ್ನು ನಿರೂಪಿಸಿ, ವಿದ್ಯಾರ್ಥಿಯ ಯಶ್ವಿತಾ ಸ್ವಾಗತಿಸಿ, ವಿದ್ಯಾರ್ಥಿ ಕುಮಾರಿ ಪ್ರಾಪ್ತಿ ವಂದಿಸಿದರು. ಶಾಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.
ಬೆಳ್ತಂಗಡಿ ಶ್ರೀ ಧ. ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬೇಸಿಗೆ ಶಿಬಿರ
p>