ನಾರಾವಿ : ಸಂತ ಅಂತೋನಿ ಚರ್ಚ್ ನಾರಾವಿಯಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಬಲಿಪೂಜೆಯನ್ನು ಅರ್ಪಿಸಿ, ಸಭಾಕಾರ್ಯಕ್ರಮದ ಅಧ್ಯಕ್ಷತೆ ವಂ. ಫಾ.ಸೈಮನ್ ಡಿ ಸೋಜ ವಹಿಸಿ ಶುಭಾ ಹಾರೈಸಿದರು.
ಸಂಪನ್ಮೂಲ ವ್ಯಕ್ತಿಯಾದ ಶ್ರೀಮತಿ ಮಾರ್ಗರೀಟಾ ಪಿಂಟೋ , ಮುಖ್ಯ ಅತಿಥಿಯಾಗಿ ವಂಫಾ ಆಲ್ವಿನ್ ಸೆರಾವೊರವರು, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಸ೦ಜಯ್ ಮಿರಾಂದರವರು ಹಾಗೂ ಸ್ತ್ರೀ’ ಮಂಡಳಿಯ ಅಧ್ಯಕ್ಷೆ ಶ್ರೀಮತಿ ಎಬ್ಜಿನ್ ನ್ ರೊಡ್ರಿಗಸ್ ವೇದಿಕೆಯಲ್ಲಿ ಉಸ್ಥಿತರಿದ್ದರು. ನಾರಾವಿ ಚರ್ಚಿಗೆ ಸಂಬಂಧಪಟ್ಟ ರಾಜಕೀಯ ಕ್ಷೇತ್ರದಲ್ಲಿ ಸೇವೆಯನ್ನು ಸಲ್ಲಿಸಿದ ನಮ್ಮ ಚರ್ಚಿನ 6 ಮಹಿಳೆಯರು ಹಾಗೂ ಶಿಕ್ಷಕ ವೃತ್ತಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ 7 ಶಿಕ್ಷಕಿಯರನ್ನು ಸನ್ಮಾನಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಹಿಳೆಯರು ಹೊಲದಲ್ಲಿನ ನೃತ್ಯದ ಮೂಲಕ ನೆರೆದವರನ್ನು ಮನರಂಜಿಸಿದರು. ಸ೦ಪನ್ಮೂಲ ವ್ಯಕ್ತಿಯಾದ ಶ್ರೀಮತಿ ಮಾರ್ಗರೀಟಾ ಪಿಂಟೋ ರವರು ಮಹಿಳೆಯರ ಆರೋಗ್ಯ ಮತ್ತು ತಮ್ಮ ಮಕ್ಕಳ ಪಾಲನೆಯ ಬಗ್ಗೆ ಮಾಹಿತಿ ನೀಡಿದರು. ಮಹಿಳೆಯರಿಗೆ ಒಳಾಂಗಣ ಸ್ಪರ್ಧೆಯನ್ನು ಏರ್ಪಡಿಸಿ ಬಹುಮಾನವನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಚರ್ಚಿನ ಮಹಿಳೆಯರು ಭಾಗವಹಿಸಿದ್ದರು. ಶ್ರೀಮತಿ ಡೈನಾ ರೋಡ್ರಿಗಸ್ ಧನ್ಯವಾದವಿತ್ತರು. ಸ್ತ್ರೀ ಮಂಡಳಿಯ ಕಾರ್ಯದರ್ಶಿಯಾದ ಶ್ರೀಮತಿ ಝೀಟಾ ಕ್ರಾಸ್ತಾ ನಿರೂಪಿಸಿದರು.