ಬೆಳ್ತಂಗಡಿ: ಧರ್ಮ ಪ್ರಾಂತ್ಯ ದ ವಿವಿಧ ಹಂತಗಳಲ್ಲಿ ಹಾಗೂ ವಿವಿಧ ಸಂಘಟನೆಗಳಲ್ಲಿ ಕಾರ್ಯನಿರತರಾಗಿರುವ ವ್ಯಕ್ತಿಗಳಿಗಾಗಿ ವ್ಯಕ್ತಿ ವಿಕಾಸ ಮತ್ತು ಸಮಾಜ ವಿಕಾಸ ಎಂಬ ಶೀರ್ಷಿಕೆಯಲ್ಲಿ ಒಂದು ದಿನದ ಪುನಶ್ಚೇತನ ಶಿಬಿರಕ್ಕೆ ಚಾಲನೆ ನೀಡಲಾಯಿತು.
ನಾಯಕತ್ವದ ಮೂಲಕ ಸಮಾಜದ ಬೆಳವಣಿಗೆಗೆ ಹೇಗೆ ತಮ್ಮನ್ನು ತೊಡಗಿಸಿಕೊಳ್ಳಬೇಕು. ಪ್ರತಿಯೊರ್ವ ವ್ಯಕ್ತಿ ಲೋಕದ ಬೆಳಕು ಭೂಮಿಯ ಉಪ್ಪಾಗಿ ತಮ್ಮನ್ನೆ ಸಮರ್ಪಿಸುವುದೇ ನಾಯಕತ್ವ ಎಂಬ ಸಂದೇಶವನ್ನು ಕಾರ್ಯ ನಿರತ ಸದಸ್ಯರಿಗೆ ನೀಡುತ್ತ ಈ ಒಂದು ದಿನದ ಕಾರ್ಯಾಗಾರವನ್ನು ತೋಟತ್ತಾಡಿ ಸಂತ ಅಂತೋನಿಯವವರ ದೇವಾಲಯದಲ್ಲಿ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ. ಲಾರೆನ್ಸ್ ಮುಕ್ಕುಯಿ ಉದ್ಘಾಟಿಸಿದರು.
ವಂ.ಫಾ| ಜೋಸ್ ಪೂವತಿಂಕಲ್ ಸ್ವಾಗತಿಸಿದರು. ಧರ್ಮಪ್ರಾಂತ್ಯದ ಚಾನ್ಸಲರ್ ವಂ. ಫಾ| ಲಾರೆನ್ಸ್ ಪೂಣೋಲಿಲ್ ನಿರೂಪಿಸಿದರು. ವೇದಿಕೆಯಲ್ಲಿ ಫಾ. ವಾಳೂ ಕಾರನ್, ವಂ. ಭಗೀನಿ ಸಿ| ಟ್ರೀಸ, ಮಾಧ್ಯಮ ಪ್ರತಿನಿಧಿ ಶಿಬಿ ಧರ್ಮಸ್ಥಳ, ಕೆ ಎಸ್ ಎಂ ಸಿ ಎ ಪ್ರದಾನ ಕಾರ್ಯದರ್ಶಿ ಸೇಬಾಸ್ಟಿನ್ ಎಂ ಜೆ , ಶ್ರೀಮತಿ ಸುಪ್ರಿಯಾ ಉಪಸ್ಥಿತರಿದ್ದರು. ಕಾರ್ಯಕ್ರಮ ತರಬೇತಿದಾರರಾಗಿ ಕೊಟ್ಟಯಂನಿಂದ ಅರುಣ್ ಮೂವಾಟ್ಟು ಪುಯ ಶಿಬಿರವನ್ನು ನಡೆಸಿಕೊಟ್ಟರು.