ಬೆಳ್ತಂಗಡಿಯಲ್ಲಿ ಸಾನಿಧ್ಯ ಉತ್ಸವ 2023 : ಮೂವರು ಸಾಧಕರಿಗೆ ಸಾನಿಧ್ಯ ರತ್ನ ಬಿರುದು

0

p>

ಬೆಳ್ತಂಗಡಿ : ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರ ಎಂಡೋಸಲ್ಫಾನ್ ಸಂತ್ರಸ್ತರ ಮಕ್ಕಳಿಗಾಗಿ ಶ್ರೀ ಗಣೇಶ್ ಸೇವಾ ಟ್ರಸ್ಟಿನ ಸೇವಾ ಘಟಕ ಉಜಿರೆ ಮತ್ತು ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ ಇದರ ಜಂಟಿ ಆಶ್ರಯದಲ್ಲಿ ಸಾನಿಧ್ಯ ಉತ್ಸವ 2023 ಮಾ. 25 ರಂದು ಸಂಜೆ ಬೆಳ್ತಂಗಡಿಯ ಮಾರಿಗುಡಿ ಮೈದಾನದಲ್ಲಿ ನಡೆಯಿತು.

ಕಾರ್ಯಕ್ರರ್ಮದಲ್ಲಿ ಮೂವರು ಸಾಧಕರಾದ ಜೋನ್ ಬ್ಯಾಪ್ಟಿಸ್ಟ್ ಡಿಸೋಜ ಬೆಳ್ತಂಗಡಿ ತಾಲೂಕು ಮೇಲ್ವಿಚಾರಕರಾಗಿ ಕಳೆದ ಎಂಟು ವರ್ಷಗಳಿಂದ ತಾಲೂಕಿನ ವಿಕಲಚೇತನರಿಗೆ ಸರಕಾರದಿಂದ ಸಿಗುವ ಎಲ್ಲ ಯೋಜನೆಗಳನ್ನು ನೀಡುವಲ್ಲಿ ಯಶಸ್ವಿಯನ್ನು ಕಂಡಿರುತ್ತಾರೆ ಇವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಇವರಿಗೆ ಸಾನಿಧ್ಯ ರತ್ನ ಬಿರಿದು ನೀಡಿ ಗೌರವಿಸಲಾಯಿತು.

ಚಿರಂಜೀವಿ ಶೆಟ್ಟಿ ವಿಶೇಷ ಚೇತನರಾಗಿದ್ದುಕೊಂಡು ವಿವಿಧ ಕ್ಷೇತ್ರಗಳಲ್ಲಿ ತನ್ನನ್ನು ನಾನು ತೊಡಗಿಸಿಕೊಂಡು ಕಳೆದ ಒಂದು ವರ್ಷಗಳಿಂದ ವಿ.ಆರ್.ಡಬ್ಲ್ಯೂ ಆಗಿ ಗ್ರಾಮ ಪಂಚಾಯತ್ ಕಣಿಯೂರು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಹಲವಾರು ವರ್ಷ ಗಳಿಂದ ಎಡಿಟಿಂಗ್ ಮಾಡುತ್ತಾ ಬಂದಿರುತ್ತಾರೆ ಅದೇ ರೀತಿ ನಿರ್ವಹಣೆ ಮತ್ತು ನಿರ್ಮಾಣಕಾರರಾಗಿ ಸಿ.ಎಸ್ ಚಿರು ಎಂಬ ಹೆಗ್ಗಳಿಕೆಯ ಹೆಸರನ್ನು ಪಡೆದಿರುತ್ತಾರೆ ಅದಲ್ಲದೆ ಇನ್ನಿತರ ಸಭೆ ಸಮಾರಂಭಗಳಲ್ಲಿ ಗಾನ ವೈಭವ ಎಂಬ ಹೆಸರನ್ನು ಇಟ್ಟು ತನ್ನ ತಂಡದಿಂದ ಹಲವಾರು ಕಾರ್ಯಕ್ರಮಗಳನ್ನು ನೀಡುತ್ತಿದ್ದು ಇವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಇವರಿಗೆ ಸಾನಿಧ್ಯ ರತ್ನ ಬಿರುದು ನೀಡಿ ಗೌರವಿಸಲಾಯಿತು .
ವಿಪುಲ್ ಪೂಜಾರಿ ಇವರು ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮ ಪಂಚಾಯತ್ ನಲ್ಲಿ 2016 ನೇ ವರ್ಷದಿಂದ ಗ್ರಾಮೀಣ ವಿಶೇಷ ವಿಕಲಚೇತನರ ಪುನರ್ವಸತಿ ಕಾರ್ಯಕರ್ತನಾಗಿ ಕಾರ್ಯ ನಿರ್ವಹಿಸುತ್ತಾರೆ ಇವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಇವರಿಗೆ ಸಾನಿಧ್ಯ ರತ್ನ ಬಿರುದು ನೀಡಿ ಗೌರವಿಸಲಾಯಿತು.

p>

LEAVE A REPLY

Please enter your comment!
Please enter your name here