ಎಸ್‌ಎಮ್‌ಎ ಉಜಿರೆ ರೀಜಿನಲ್ ವತಿಯಿಂದ ರಂಝಾನ್ ಕಿಟ್ ವಿತರಣೆ

0

ಉಜಿರೆ : ಸುನ್ನೀ ಮೆನೇಜ್‌ಮೆಂಟ್ ಅಸೋಸಿಯೇಷನ್ (ಎಸ್‌ಎಮ್‌ಎ) ಉಜಿರೆ ರೀಜಿನಲ್ ಸಮಿತಿಯ ವತಿಯಿಂದ19 ಮೊಹಲ್ಲಾಗಳ ಧರ್ಮಗುರುಗಳಿಗೆ ರಂಝಾನ್ ಸ್ಪೆಷಲ್ ಕಿಟ್ ವಿತರಣೆ ಹಾಗೂ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ (ಎಸ್‌ಜೆ‌ಎಮ್) ಉಜಿರೆ ರೇಂಜ್ ಜಲ್ಸತುಲ್ ವಿದಾಅ್ ಕಾರ್ಯಕ್ರಮ ಉಜಿರೆಯಲ್ಲಿ ಜರುಗಿತು.

ಅಧ್ಯಕ್ಷತೆಯನ್ನು ಎಸ್‌ಎಮ್‌ಎ ಉಜಿರೆ ರೀಜಿನಲ್ ಅಧ್ಯಕ್ಷ ಮುಹ್ಯುದ್ದೀನ್ ವಹಿಸಿದ್ದರು. ರೇಂಜ್ ಕೋಶಾಧಿಕಾರಿ ಖಾಲಿದ್‌ ಮುಸ್ಲಿಯಾರ್ ಕುಂಟಿನಿ ಉದ್ಘಾಟಿಸಿದರು. ಎಸ್‌ಎಮ್‌ಎ ಕೋಶಾಧಿಕಾರಿ ಹನೀಫ್ ಮುಸ್ಲಿಯಾರ್ ಶುಭಾಶಯ ಕೋರಿದರು.
ಝೋನ್ ಅಧ್ಯಕ್ಷ ಹಮೀದ್ ನೆಕ್ಕರೆ ಮುಂಡಾಜೆ, ಎಸ್‌ಜೆಎಮ್ ರೇಂಜ್ ಅಧ್ಯಕ್ಷ ಇಬ್ರಾಹಿಂ ಸಖಾಫಿ ಕಬಕ, ಹೈದರ್ ಮದನಿ, ಇಬ್ರಾಹಿಂ ಅತ್ತಾಜೆ‌, ಯೂಸುಫ್ ಕುಂಟಿನಿ ಇವರು ವೇದಿಕೆಯಲ್ಲಿದ್ದರು.

ಉಜಿರೆ ರೀಜಿನಲ್ ವ್ಯಾಪ್ತಿಯ 19 ಮೊಹಲ್ಲಾಗಳ 42 ಮಂದಿಗೆ ಕಿಟ್ ಹಸ್ತಾಂತರಿಸಲಾಯಿತು. ಎಸ್‌ಎಮ್‌ಎ ರೀಜನಲ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಲೀಲ್ ಸಖಾಫಿ ಸ್ವಾಗತಿಸಿ ಕಾರ್ಯಕ್ರಮ‌ ನಿರೂಪಿಸಿದರು. ಅಶ್ರಫ್ ಹಿಮಮಿ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here