ಬೆಳಾಲು-ಬೆಳಾಲು ಗ್ರಾಮದ ಎರ್ಮಲದಲ್ಲಿ ಅಕ್ರಮವಾಗಿ ಶೇಖರಿಸಿಟ್ಟ ಮಧ್ಯವನ್ನು ಧರ್ಮಸ್ಥಳ ಪೊಲೀಸರು ವಶಪಡಿಸಿಕೊಂಡ ಘಟನೆ ಮಾ.20 ರಂದು ನಡೆದಿದೆ. ಧರ್ಮಸ್ಥಳದ ಎಸ್ ಐ ಅನಿಲ್ ಕುಮಾರ್ ನೇತೃತ್ವದ ತಂಡ ಖಚಿತ ಮಾಹಿತಿಯ ಆಧಾರದಲ್ಲಿ ಬೆಳಾಲಿನ ಎರ್ಮಲದ ಶ್ರೀಧರ ಪೂಜಾರಿಯವರ ಶೇಂದಿ ಅಂಗಡಿಗೆ ದಾಳಿ ನಡೆಸಿದರು.
ಈ ವೇಳೆ ಅಂಗಡಿಯಲ್ಲಿದ್ದ ವ್ಯಕ್ತಿ ಹಿಂಬದಿ ಬಾಗಿಲಿನಿಂದ ಓಡಿ ಹೋಗಿದ್ದು, ಪೊಲೀಸರು ಅಟ್ಟಾಡಿಸಿಕೊಂಡು ಹೋದರೂ ರಬ್ಬರ್ ತೋಟಕ್ಕೆ ನುಗ್ಗಿ ಪರಾರಿಯಾಗಿದ್ದಾನೆ. ನಂತರ ಅಂಗಡಿಯನ್ನು ಜಾಲಾಡಿದ ಪೊಲೀಸರಿಗೆ ಶ್ರೀಧರ ಪೂಜಾರಿಯವರ ಅಂಗಡಿಯಲ್ಲಿ ಯಾವುದೇ ದಾಖಲಾತಿ ಇಲ್ಲದೆ ಅಕ್ರಮವಾಗಿ ಶೇಖರಿಸಿಟ್ಟ ಅಮಲು ಪದಾರ್ಥಗಳು ಸಿಕ್ಕಿವೆ.
ವ್ಯಾಪಾರ ಮಾಡಲೆಂದು ತಂದಿರಿಸಿದ್ದ ಎನ್ನಲಾಗಿರುವ 5.4 ಲೀಟರ್ ಮಧ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ಲಾಸ್ಟಿಕ್ ಚೀಲದಲ್ಲಿ 180 ಎಂ ಎಲ್ ನ ಮೈಸೂರ್ ಲ್ಯಾನ್ಸರ್ ನ 30 ಸ್ಯಾಚೆಟ್ ಗಳು ಕಂಡು ಬಂದಿದ್ದು, ಸ್ವಂತ ಉಪಯೋಗಕ್ಕೆ ಬಳಸುವ ಅನುಪಾತಕ್ಕಿಂತ ಜಾಸ್ತಿಯಿರುವುದರಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಮಲು ಪದಾರ್ಥದ ಮೌಲ್ಯ 2,250 ರೂಪಾಯಿ ಆಗಿರುತ್ತದೆ.
ಬೆಳಾಲು ಎರ್ಮಲದಲ್ಲಿ ಅಕ್ರಮ ಮಧ್ಯ ಶೇಖರಣೆ- ಧರ್ಮಸ್ಥಳ ಪೊಲೀಸರಿಂದ ದಾಳಿ-ಮಧ್ಯ ವಶಕ್ಕೆ
p>